ಮಿಜೋರಾಂ: ಕಲ್ಲು ಗಣಿಗಾರಿಕೆಯಲ್ಲಿ ಉಂಟಾದ ಕುಸಿತಗೊಂಡ ಪರಿಣಾಮ ಹತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿ, ಹಲವರು ನಾಪತ್ತೆಯಾಗಿರುವ ಘಟನೆ ಮಿಜೋರಾಂನ ಐಜ್ವಾಲ್ ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ಭಾರೀ ಮಳೆಯ ನಡುವೆ ಈ ಕುಸಿತ ಸಂಭವಿಸಿದ್ದು, ಗಣಿ ಕುಸಿತದಿಂದ ಅಕ್ಕಪಕ್ಕದ ಹಲವು ಮನೆಗಳೂ ನಾಶವಾಗಿವೆ.
ಮೃತರ ಶವಗಳನ್ನು ಹೊರತೆಗೆಯಲಾಗಿದೆ. ಆದರೂ, ಇನ್ನೂ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅದೃಷ್ಟವಶಾತ್, ಮಗುವನ್ನು ಸ್ಥಳದಿಂದ ರಕ್ಷಿಸಲಾಗಿದ್ದು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ಕ್ವಾರಿ ಕುಸಿತದ ಜೊತೆಗೆ, ರೆಮಲ್ ಚಂಡಮಾರುತವು ಮಿಜೋರಾಂನಾದ್ಯಂತ ಹಾನಿಯನ್ನುಂಟು ಮಾಡಿದೆ ಮಾತ್ರವಲ್ಲದೇ ಹಲವಾರು ಇತರ ವಿಪತ್ತುಗಳಿಗೆ ಕಾರಣವಾಗಿದೆ.