ಮೀನುಗಾರ ಸಮುದಾಯದ ಶಾಂತಿ ಕದಡಬೇಡಿ-ಮೀನುಗಾರರು ವ್ಯಾಪಾರಸ್ಥರ ಸಂಘಗಳ ಮನವಿ

ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಕೋಮು ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಒಕ್ಕೂಟವು ಹಲವು ವರ್ಷಗಳಿಂದ ಶಾಂತಿ ಕಾಪಾಡಿಕೊಂಡು ಬಂದಿದ್ದು ಯಾವುದೇ ಗೊಂದಲಗಳು ಇಲ್ಲ. ಇದೀಗ ಹೊರಗಿನವರು ಯಾರೂ ಸಮುದಾಯದ ಈ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಮಂಗಳೂರು ಮೀನುಗಾರರು ಹಾಗೂ ಮೀನು ವ್ಯಾಪಾರಸ್ಥರ ಸಂಘಗಳು ಜಂಟಿ ಸುದ್ದಿಗೋಷ್ಟಿ ನಡೆಸಿ ಆರೋಪಿಸಿವೆ.

ಮಂಗಳೂರು: ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಕೋಮು ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಒಕ್ಕೂಟವು ಹಲವು ವರ್ಷಗಳಿಂದ ಶಾಂತಿ ಕಾಪಾಡಿಕೊಂಡು ಬಂದಿದ್ದು ಯಾವುದೇ ಗೊಂದಲಗಳು ಇಲ್ಲ. ಇದೀಗ ಹೊರಗಿನವರು ಯಾರೂ ಸಮುದಾಯದ ಈ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಮಂಗಳೂರು ಮೀನುಗಾರರು ಹಾಗೂ ಮೀನು ವ್ಯಾಪಾರಸ್ಥರ ಸಂಘಗಳು ಜಂಟಿ ಸುದ್ದಿಗೋಷ್ಟಿ ನಡೆಸಿ ಆರೋಪಿಸಿವೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘ, ಮಂಗಳೂರು ಟ್ರಾಲ್ ಬೋಟ್, ಹಸಿಮೀನು ವ್ಯಾಪಾರಸ್ಥರು, ಒಣ ಮೀನು ವ್ಯಾಪಾರಸ್ಥರು, ಸೀ ಫುಡ್ ಬಯ್ಸರ್ ಅಸೋಸಿಯೇಶನ್, ಮಂಗಳೂರು ಹಸಿ ಮೀನು ಕಮಿಶನ್ ಏಜೆಂಟರ ಸಂಘ, ದ.ಕ. ಜಿಲ್ಲಾ ಗಿಲ್ ನೆಟ್ ಮೀನುಗಾರರ ಸಂಘಗಳ ಪ್ರತಿನಿಧಿಗಳು ಸಮುದಾಯಗಳ ಮಧ್ಯೆ ಗೊಂದಲ ಮಾಡುವುದನ್ನು ಬಿಟ್ಟು, ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಿ ಎಂದು ಅವರು ಮನವಿ ಮಾಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೀನುಗಾರರ ಮುಖಂಡ ಮತ್ತು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರೂ ಆಗಿರುವ ಚೇತನ್ ಬೆಂಗ್ರೆ ಕಳೆದ ಹಲವಾರು ವರ್ಷಗಳ ಹಿಂದೆ ಹಿರಿಯರು ಸೇರಿ ಕೈಗೊಂಡ ಒಮ್ಮತದ ನಿರ್ಧಾರದ ಪ್ರಕಾರ ಮೀನುಗಾರಿಕಾ ಬಂದರಿನಲ್ಲಿ ಎಂಟು ದಿನ ಮೀನುಗಾರಿಕಾ ರಜೆಗಳನ್ನು ಘೋಷಿಸಲಾಗಿದೆ.

ಚೌತಿ ಹಬ್ಬ, ಬಾರ್ಕೂರು ಶ್ರೀ ಕುಲ ಮಹಾಸ್ತ್ರಿ ಅಮ್ಮನವರ ವಾರ್ಷಿಕ ಜಾತ್ರೆ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವಾರ್ಷಿಕ ಜಾತ್ರೆ, ಮೀಲಾದುನ್ನಬಿ, ಬಕ್ರೀದ್, ಈದುಲ್ ಫಿತ್ರ್, ಕ್ರಿಸ್ಮಸ್ ಹಾಗೂ ಗುಡ್ ಫ್ರೈಡೆ ಈ ರಜೆಯನ್ನು ಎಲ್ಲರೂ ಕ್ರಮಬದ್ಧವಾಗಿ ಪಾಲಿಸುತ್ತಿದ್ದಾರೆ.

ಚೌತಿ ಸಂದರ್ಭದಲ್ಲೂ ಹೊಸತಾಗಿ ಮೀನುಗಾರಿಕೆ ಚಟುವಟಿಕೆಗೆ ಬಂದವರು ಒಕ್ಕೂಟದ ನಿರ್ಣಯ ಉಲ್ಲಂಘಿಸಿ ಮೀನುಗಾರಿಕಾ ಚಟುವಟಿಕೆ ನಡೆಸಿರುವುದು ಕಂಡುಬಂದಿದ್ದು, ಇದಕ್ಕಾಗಿ ರಜೆಯ ನಿರ್ಬಂಧವನ್ನು ಕಡ್ಡಾಯವಾಗಿ ಪಾಲಿಸುವಂತೆ ಫ್ಲೆಕ್ಸ್ ಮೂಲಕ ತಿಳಿಸಲಾಗಿತ್ತು.

ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬಂದರು ಪ್ರದೇಶದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸುವುದು ಇದೇ ಮೊದಲಲ್ಲ, ಪ್ರತೀ ವರ್ಷವೂ ಹೊಸತಾಗಿ ಮೀನುಗಾರಿಕೆ ಚಟುವಟಿಕೆ ನಡೆಸುವವರಿಗೆ ತಿಳಿಯುವ ಹಾಗೂ ಮೀನಿಗಾಗಿ ಬಂದರಿಗೆ ಬರುವವರಿಗೆ ಮಾಹಿತಿಗಾಗಿ ಈ ಕ್ರಮ ಅನುಸರಿಸಲಾಗುತ್ತದೆ ಎಂದು ಚೇತನ್ ಬೆಂಗ್ರೆ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪರ್ಸಿನ್ ಮೀನುಗಾರರ ಸಂಘದ ಉಪಾಧ್ಯಕ್ಷ ಮನೋಹರ್ ಬೆಂಗ್ರೆ, ವಿವಿಧ ಸಂಘಗಳ ಮುಖಂಡರಾದ ಯು.ಕೆ.ಅಹ್ಮದ್, ಸುಭಾಶ್ಚಂದ್ರ ಕಾಂಚನ್, ಇಬ್ರಾಹೀಂ ಬೆಂಗರೆ, ಎಸ್.ಎಂ.ಇಬ್ರಾಹೀಂ ಮೊದಲಾದವರು ಉಪಸ್ಥಿತರಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement