ಸ್ಕ್ರಿಪ್ಟ್ ಸಿದ್ಧವಾಗದೆಯೇ ಮುಂದಿನ ಸಿನಿಮಾಕ್ಕಾಗಿ ಮುಂಗಡವಾಗಿ 55 ಕೋಟಿ ರೂಪಾಯಿ ಪಡೆದ ಚಿತ್ರ ನಿರ್ದೇಶಕೊರೊಬ್ಬರು ಈಗ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ನಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ಎಸ್.ಎಸ್. ರಾಜಮೌಳಿ, ಪ್ರಶಾಂತ್ ನೀಲ್ ಮತ್ತು ರೋಹಿತ್ ಶೆಟ್ಟಿ ಇವರಲ್ಲಿ ಯಾರಾದರೊಬ್ಬರು ಆಗಿರಬಹುದು ಎಂದು ನೀವು ಊಹಿಸಿದ್ದರೆ ಅದು ತಪ್ಪು. ಯಾಕೆಂದರೆ ಇವರು ಸ್ಟಾರ್ ನಿರ್ದೇಶಕರಲ್ಲ. ಆದರೆ ಸ್ಟಾರ್ ನಿರ್ದೇಶಕರಿಗೆ ಪೈಪೋಟಿ ನೀಡಬಲ್ಲವರು.
ಸ್ಟಾರ್ ನಟರಷ್ಟೇ ಸ್ಟಾರ್ಡಮ್ ಹೊಂದಿರುವ ಹಾಗೂ ದುಬಾರಿ ನಿರ್ದೇಶಕರು ಎಂಬ ಹೆಗ್ಗಳಿಕೆಯನ್ನು ಪಡೆದಿರುವ ರಾಜಮೌಳಿ, ಪ್ರಶಾಂತ್, ರೋಹಿತ್ ಅವರ ಸಾಲಿನಲ್ಲಿ ಈಗ ಮತ್ತೊಂದು ಹೆಸರು ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇವರ ಹೆಸರು ಈಗ ಟ್ರೆಂಡಿಂಗ್ನಲ್ಲಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಸೂಪರ್ ಹಿಟ್ “ಜೈಲರ್” ಸಿನೆಮಾದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ತಮ್ಮ ಎರಡನೇ ಭಾಗದ ಸಿನೆಮಾಕ್ಕಾಗಿ ಸ್ಕ್ರಿಪ್ಟ್ ಇಲ್ಲದೆಯೇ 55 ಕೋಟಿ ರೂಪಾಯಿ ಮುಂಗಡ ಹಣವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು ಈ ಸುದ್ದಿಯೇ ಈಗ ದೊಡ್ಡ ಸದ್ದು ಮಾಡುತ್ತಿದೆ
ಜೈಲರ್ ಸಿನೆಮಾ ಹಿಟ್ ಆದ ಬಳಿಕ ಅದೇ ಸಿನೆಮಾ ಎರಡನೇ ಭಾಗದಲ್ಲಿ ಬರಲಿದೆ ಎನ್ನಲಾಗುತ್ತಿದೆ. ಸಿನೆಮಾ ವಿಮರ್ಶಕ ಮನೊಬಾಲ ವಿಜಯ್ಬಾಲನ್ ಅವರು ಈ ಕುರಿತು ಟ್ವೀಟ್ ಮಾಡಿದ್ದರು.
ರಜನಿಕಾಂತ್ ನಟನೆಯ ನೆಲ್ಸನ್ ನಿರ್ದೇಶನದ ಜೈಲರ್ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿಸುಮಾರು 600 ಕೋಟಿ ರೂ. ಸಂಗ್ರಹಿಸಿ ದಾಖಲೆ ನಿರ್ಮಿಸಿತ್ತು. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದ್ದು, ಚಿತ್ರ ಯಶಸ್ವಿಯಾದ ಬಳಿಕ ಕಲಾನಿಧಿ ಮಾರನ್ ಅವರು ರಜನಿಕಾಂತ್, ನೆಲ್ಸನ್ ಮತ್ತು ಅನಿರುದ್ಧ್ ಅವರಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ.
ಒಂದು ವೇಳೆ ನೆಲ್ಸನ್ ದಿಲೀಪ್ ಕುಮಾರ್ ಅವರು ಜೈಲರ್ 2 ಸಿನೆಮಾ ಮಾಡಿದರೆ ಭಾರತೀಯ ಸಿನೆಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಿರ್ದೇಶಕರು ಎಂಬ ಖ್ಯಾತಿ ಪಡೆಯಲಿದ್ದಾರೆ. ಆದರೆ ಈ ಸಿನೆಮಾ ಕ್ಕಾಗಿ ಅವರು 55 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎನ್ನುವುದಕ್ಕೆ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ.