ಮುಂದಿನ ಪೀಳಿಗೆಗೆ ಪರಿಸರ ಉಳಿಸಿ -ನ್ಯಾಯಾಧೀಶ ರೋಣ್ ವಾಸುದೇವ್

 

ಚಿತ್ರದುರ್ಗ: ಮಕ್ಕಳಿಗಾಗಿ ಆಸ್ತಿ ಮಾಡಿ ಉಳಿಸಿ ಹೋಗುತ್ತವೆ. ಆದರೆ ಪರಿಸರದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಪರಿಸರ ನಾಶದಿಂದ ಮುಂದಿನ ಪೀಳಿಗೆ ಸಂಕಷ್ಟಕ್ಕೆ ಸಿಲುಕುತ್ತಿದೆ. ಮುಂದಿನ ಪೀಳಿಗೆ ಹಿತ ದೃಷಿಯಿಂದ ಪರಿಸರವನ್ನು ಉಳಿಸುವುದು ಅತಿ ಮುಖ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ್ ವಾಸುದೇವ್ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ, ಬುಧವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ಸರ್ಕಾರಿ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ವಾತಾವರಣದಲ್ಲಿ ತಾಪಮಾನ ಹೆಚ್ಚಾದ ಹಿನ್ನಲೆಯಲ್ಲಿ ಜನರು ಫ್ಯಾನ್ ಹಾಗೂ ಎಸಿ ಬಳಕೆಗೆ ಮೊರೆ ಹೊಗುತ್ತಿದ್ದಾರೆ. ಎಸಿನ ಬಳಸುವುದರಿಂದ ಕ್ಲೋರೋಫೋರೊ ಕಾರ್ಬನ್ ಅನಿಲ ಹೊರಸೂಸುತ್ತದೆ. ಈ ಅನಿಲದಿಂದ ಓಝೋನ್ ಪದರವು ಹಾನಿಗೊಳಗಾಗಿ ಕ್ಷೀಣಿಸುತ್ತಿದೆ. ಓಝೋನ್ ಪದರವು ಹಾಳಾಗಿ ಸೂರ್ಯನ ಕಿರಣಗಳು ಭೂಮಿಗೆ ನೇರವಾಗಿ ಸ್ಪರ್ಶಿಸುವುದರಿಂದ ತಾಪಮಾನ ಹೆಚ್ಚಾಗುತ್ತದೆ. ತಾಪಮಾನ ಹೆಚ್ಚಾಗಿದೆ ಎಂದು ಮತ್ತದೇ ರೀತಿ ಫ್ಯಾನ್ ಹಾಗೂ ಎಸಿ ಗಳನ್ನು ಬಳಸುವುದರಿಂದ ಓಝೋನ್ ಪದರವು ಇನ್ನೂ ಹೆಚ್ಚು ಹಾನಿಗೊಳಗಾಗುತ್ತದೆ. ಇದರ ಪರಿಣಾಮ ಇನ್ನಷ್ಟು ತಾಪಮಾನ ಹೆಚ್ಚಾಗುತ್ತದೆ. ಪರಿಸರ ದಿನಾಚರಣೆ ಸಸಿ ನೆಡುವುದಕ್ಕೆ ಸೀಮಿತವಾಗಬಾರದು. ವಾತಾವರಣಕ್ಕೆ ಪೂರಕವಾಗಿ ಸ್ಪಂದಿಸಿ ಪರಿಸರವನ್ನು ಕಾಪಾಡವ ಕರ್ತವ್ಯಕ್ಕೆ ಮುನ್ನುಡಿಯಾಗಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ ಮಾತನಾಡಿ, ಪರಿಸರ ನಾಶದಿಂದ ಕಳೆದ ಬೇಸಿಗೆಯ ತಾಪಮಾನದಿಂದ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದೇವೆ. ನಮ್ಮ ದೇಶ 1988ರಲ್ಲಿ ರಾಷ್ಟಿçÃಯ ಅರಣ್ಯ ನೀತಿಯನ್ನು ಅಳವಡಿಸಿಕೊಂಡಿದೆ. ಅದರಂತೆ ಭೂ ಭಾಗದ 3/1 ರಷ್ಟು ಅರಣ್ಯ ಹೊಂದಿರಬೇಕು. ಇಲ್ಲವಾದಲ್ಲಿ ಈ ರೀತಿಯ ಹವಮಾನ ವೈಪರೀತ್ಯಗಳನ್ನು ಅನುಭವಿಸಬೇಕಾಗುತ್ತದೆ. ಇರುವುದೊಂದೇ ಭೂಮಿ ಅದನ್ನು ಸಂರಕ್ಷಿಸಬೇಕು, ಇಲ್ಲವಾದಲ್ಲಿ ಮಾನವ ಮತ್ತು ಪ್ರಾಣಿ ಸಂಕುಲ ನಾಶವಾಗುದರಲ್ಲಿ ಸಂದೇಹವಿಲ್ಲ ಎಂದರು.

 

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಂಗಾಧರ ಚನ್ನಬಸಪ್ಪ ಹಡಪದ್ ಸೇರಿದಂತ ಇತರೆ ನ್ಯಾಯಾಧೀಶರುಗಳಾದ ಡಿ. ಮಮತ, ಎ.ಎಂ.ಚೈತ್ರಾ, ರಶ್ಮಿ.ಎಸ್.ಮುರಡಿ, ಎಸ್.ಅನಿತಾ ಕುಮಾರಿ, ಆರ್.ಸಹನಾ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ವಲಯ ಅರಣ್ಯಾಧಿಕಾರಿ ಹೆಚ್.ಉಷಾರಾಣಿ, ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಬಿ.ಟಿ.ತಿಪ್ಪೇರುದ್ರಸ್ವಾಮಿ, ಅರಣ್ಯ ಇಲಾಖೆಯ ಹಾಗೂ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement