ನವದೆಹಲಿ: ಮುಂದಿನ ಚುನಾವಣೆಗೆ ಎಲ್ಲ ರಾಷ್ಟೀಯ ಪಕ್ಷಗಳು ಸಿದ್ಧತೆ ನಡೆಸುತ್ತಿದ್ದು, ಚುನಾವಣ ಕಣ ರಂಗೇರಲು ಆರಂಭವಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ 2024ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಜೊತೆಗೆ ತಮಿಳುನಾಡಿನ ರಾಮನಾಥಪುರಂನಿಂದಲೂ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಈ ಕುರಿತು ಜು.9 ರಂದು ನಡೆದ ಬಿಜೆಪಿ ಪ್ರಾದೇಶಿಕ ಸಮಾಲೋಚನಾ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮಾತನಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಯಾವುದಾದರೂ ಒಂದು ರಾಜ್ಯದಲ್ಲಿ ಮೋದಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿದ್ದವರು ತಮಿಳುನಾಡಿನ ರಾಮನಾಥ ಪುರವನ್ನು ಸೂಚಿಸಿದ್ದಾರೆ. ಮುಸ್ಲಿಂ ಮತಗಳೇ ಪ್ರಬಲವಾಗಿರುವ ರಾಮನಾಥ ಪುರದಲ್ಲಿ ಇಂಡಿಯನ್ ಮುಸ್ಲಿಂ ಲೀಗ್ ನ ಕೆ.ನವಸ್ಕಾನಿಯನ್ನು ಸೋಲಿಸಿದರೆ, ದಕ್ಷಿಣ ಭಾರತದಲ್ಲಿ ಒಂದು ಗಟ್ಟಿ ಸಂದೇಶ ರವಾನೆಯಾಗಲಿದೆ ಎಂಬುವುದು ಬಿಜೆಪಿಯ ಲೆಕ್ಕಚಾರವಾಗಿದೆ. ಭಾರತದ ವೇದಾಂತ ಕಂಪನಿ ಜತೆಗಿನ 1.61 ಲಕ್ಷ ಕೋಟಿ ಒಪ್ಪಂದ ರದ್ದುಗೊಳಿಸಿದ ತೈವಾನ್‌ನ ಫಾಕ್ಸ್‌ಕಾನ್