ಮುಂಬೈ : ಮಹಾರಾಷ್ಟ್ರದ ರಾಜಧಾನಿಯಾದ ವಾಣಿಜ್ಯ ನಗರಿ ಮುಂಬೈಗೆ ಹೋಗುವ ಕಾರುಗಳು ಇನ್ಮುಂದೆ ಟೋಲ್ ಕಟ್ಟಬೇಕಿಲ್ಲ. ಎಲ್ಲಾ ಹಗುರ ಮೋಟಾರು ವಾಹನಗಳಿಗೆ ಟೋಲ್ನಿಂದ ವಿನಾಯಿತಿ ನೀಡಲಾಗುತ್ತಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ಘೋಷಿಸಿದ್ದಾರೆ.
ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು ಮಧ್ಯ ರಾತ್ರಿಯಿಂದಲೇ ಈ ಕ್ರಮ ಜಾರಿಗೆ ಬರಲಿದೆ. ಮಹಾರಾಷ್ಟ್ರದಲ್ಲಿ ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಅದರ ಹೊಸ್ತಿಲಲ್ಲೇ ಸರ್ಕಾರ ತೆಗೆದುಕೊಂಡಿರುವ ಈ ಟೋಲ್ ವಿನಾಯಿತಿ ನಿರ್ಧಾರವನ್ನು ಎಲೆಕ್ಷನ್ ಗಿಮಿಕ್ ಎಂದು ವಿಪಕ್ಷಗಳು ಟೀಕಿಸಿವೆ.
ಮುಂಬೈ ನಗರವನ್ನು ಪ್ರವೇಶಿಸಲು ಇರುವ ಆರು ರಸ್ತೆಗಳಲ್ಲಿ ಟೋಲ್ ಬೂತ್ಗಳಿವೆ. ದಹಿಸಾರ್, ಆನಂದ್ ನಗರ್, ವೈಶಾಲಿ, ಐರೋಲಿ ಮತ್ತು ಮುಲುಂದ್ನಲ್ಲಿರುವ ಟೋಲ್ಗಳಲ್ಲಿ ನಾಳೆಯಿಂದ ಲೈಟ್ ಮೋಟಾರು ವಾಹನಗಳು ಟೋಲ್ ಕಟ್ಟುವ ಅಗತ್ಯ ಇರುವುದಿಲ್ಲ. ಮುಕ್ತವಾಗಿ ಸಂಚರಿಸಬಹುದಾಗಿದೆ.