ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆ ಖ್ಯಾತ ಯೂಟ್ಯೂಬರ್ ಶಬನಮ್ ಶೇಖ್ ಮುಂಬೈನಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ಭುಜದ ಮೇಲೆ ಕೇಸರಿ ಧ್ವಜ, ಬೆನ್ನಿನ ಮೇಲೆ ರಾಮ ಮಂದಿರದ ಚಿತ್ರ ಮತ್ತು ಜೈ ಶ್ರೀರಾಮ್ ಘೋಷಣೆಯುಳ್ಳ ಬ್ಯಾನರ್‌ನೊಂದಿಗೆ ಮುಂಬೈನಿಂದ ಕಾಲ್ನಡಿಗೆಯಲ್ಲಿ ಪ್ರಯಾಣ ಆರಂಭಿಸಿರುವ ಶಬನಮ್ಗೆ ಇಬ್ಬರು ಸ್ನೇಹಿತರು ಕೂಡ ಸಾಥ್ ನೀಡಿದ್ದಾರೆ. ಇದುವರೆಗೂ ಸುಮಾರು 100 ಕಿಲೋಮೀಟರ್ನಷ್ಟು ಪ್ರಯಾಣ ಮುಗಿಸಿರುವ ಶಬನಮ್ ದಾರಿಯುದ್ದಕ್ಕೂ ರಾಮಭಕ್ತರನ್ನು ಭೇಟಿ ಮಾಡಿ ಅವರೊಂದಿಗೆ ಕುಣಿದು, ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಮುಂದುವರಿಯುತ್ತಿದ್ದಾರೆ. ತನ್ನನ್ನು ತಾನು ಸನಾತನಿ ಮುಸ್ಲಿಂ ಎಂದು ಕರೆದುಕೊಳ್ಳುವ ಈಕೆ ತನ್ನ ಜೀವನದ ಏಕೈಕ ಗುರಿ ರಾಮಲಲ್ಲಾನ ದರ್ಶನ ಮಾಡುವುದು ಎಂದಿದ್ದಾಳೆ. ಇನ್ನು 2024 ಜನವರಿ 22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಇಡೀ ಜಗತ್ತು ಐತಿಹಾಸಿಕ ಘಟ್ಟಕ್ಕೆ ಸಾಕ್ಷಿ ಆಗಲಿದೆ. ರಾಮನ ನೆಲದಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ. ದೇಶದಾದ್ಯಂತ ಹಳ್ಳಿ ಹಳ್ಳಿಯಲ್ಲಿ ಜನರು ಒಂದು ತಿಂಗಳ ಕಾಲ ಈ ಆಚರಣೆ ಮಾಡಲಿದ್ದಾರೆ.