ಮುಂಬೈ: ಏರ್ ಇಂಡಿಯಾ ಏರ್‌ಪೋರ್ಟ್ ಸರ್ವಿಸಸ್ ಲಿಮಿಟೆಡ್‌ನಲ್ಲಿ ಲೋಡರ್‌ಗಳಿಗಾಗಿ ನೇಮಕಾತಿ ಪ್ರಕ್ರಿಯೆಯ ಅಂಗವಾಗಿ ನಡೆದ ವಾಕ್ -ಇನ್ ಇಂಟರ್ವ್ಯೂ ಮುಂಬೈ ನಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಗಿತ್ತು.
2,216 ಖಾಲಿ ಹುದ್ದೆಗಳಿಗೆ 25,000 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಮುಂಬೈನ ಕಲಿನಾದಲ್ಲಿಅಗಮಿಸಿದ್ದು, ಕಿಕ್ಕಿರಿದು ತುಂಬಿದ ಬೃಹತ್ ಆಕಾಂಕ್ಷಿಗಳ ಗುಂಪನ್ನು ಏರ್ ಇಂಡಿಯಾ ಸಿಬ್ಬಂದಿ ನಿರ್ವಹಿಸಲು ಹೆಣಗಾಡಿದರು. ಅರ್ಜಿದಾರರು ಆಹಾರ ಮತ್ತು ನೀರಿಲ್ಲದೆ ಗಂಟೆಗಟ್ಟಲೆ ಕಾಯಬೇಕಾಯಿತು . ಕೆಲವರು ಅಸ್ವಸ್ಥರಾಗಲು ಪ್ರಾರಂಭಿಸಿದರು. ಸೀಮಿತ ಸಂಖ್ಯೆಯ ನೇಮಕಾತಿ ಹೊರತಾಗಿಯೂ, ನೇಮಕಾತಿ ಕಛೇರಿಯ ಹೊರಗೆ ಭಾರಿ ಜನಸಮೂಹ ಜಮಾಯಿಸಿದ್ದು, ಗೊಂದಲಕ್ಕೆ ಕಾರಣವಾಯಿತು.
ಏರ್‌ಪೋರ್ಟ್ ಲೋಡರ್‌ಗಳು ವಿಮಾನದಲ್ಲಿ ಸಾಮಾನುಗಳನ್ನು ಲೋಡ್ ಮಾಡುವುದು ಮತ್ತು ಇಳಿಸುವುದು ಮತ್ತು ಬ್ಯಾಗೇಜ್ ಬೆಲ್ಟ್‌ಗಳು ಮತ್ತು ರಾಂಪ್ ಟ್ರಾಕ್ಟರುಗಳನ್ನು ನಿರ್ವಹಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಪ್ರತಿ ವಿಮಾನಕ್ಕೆ ಸಾಮಾನು, ಸರಕು ಮತ್ತು ಆಹಾರ ಸರಬರಾಜುಗಳನ್ನು ನಿರ್ವಹಿಸಲು ಕನಿಷ್ಠ ಐದು ಲೋಡರ್‌ಗಳ ಅಗತ್ಯವಿದೆ.
ಏರ್‌ಪೋರ್ಟ್ ಲೋಡರ್‌ಗಳ ವೇತನವು ತಿಂಗಳಿಗೆ ₹ 20,000 ರಿಂದ ₹ 25,000 ರ ನಡುವೆ ಇರುತ್ತದೆ, ಆದರೆ ಹೆಚ್ಚಿನವರು ಓವರ್‌ಟೈಮ್ ಭತ್ಯೆಯ ನಂತರ ₹ 30,000 ಕ್ಕಿಂತ ಹೆಚ್ಚು ಗಳಿಸುತ್ತಾರೆ. ಉದ್ಯೋಗಕ್ಕಾಗಿ ಶೈಕ್ಷಣಿಕ ಮಾನದಂಡಗಳುಅಗತ್ಯವಾಗಿದ್ದು ಅಭ್ಯರ್ಥಿಯು ದೈಹಿಕವಾಗಿಯೂ ಬಲವಾಗಿರಬೇಕು.