ಬೆಂಗಳೂರು: ಮುಜರಾಯಿ ಇಲಾಖೆಯ ‘ಸಿ’ ಗ್ರೇಡ್ ದೇವಾಲಯಗಳಲ್ಲಿ ಪೂಜಿಸುವ ಅರ್ಚಕರು ಅನಾರೋಗ್ಯಕ್ಕೆ ತುತ್ತಾಗಿ ಸೇವೆ ಸಲ್ಲಿಸಲಾಗದಿದ್ದರೆ.
ಇನ್ಮುಂದೆ ಅವರ ಮಕ್ಕಳನ್ನೇ ಈ ಹುದ್ದೆಗೆ ನೇಮಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತು ಅರ್ಚಕ ಸಂಘದ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲಿಸಿ ಈ ನಿಲುವು ಪ್ರಕಟಿಸಿದೆ.
ಈ ಹಿಂದೆ ದೇವಾಲಯಗಳಲ್ಲಿ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದ ಅರ್ಚಕರು ನಿಧನರಾದರೆ ಮಾತ್ರ, ಅಂಥವರ ಮಕ್ಕಳನ್ನು ಅನುಕಂಪದ ಆಧಾರದ ಮೇಲೆ ಅರ್ಚಕರ ಹುದ್ದೆಗೆ ನೇಮಕ ಮಾಡಲಾಗುತ್ತಿತ್ತು.