ಬೆಂಗಳೂರು:ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿರುವ ಬಿಜೆಪಿ ಅಹೋರಾತ್ರಿ ಧರಣಿಗೆ ನಿರ್ಧಾರ ಮಾಡಿದೆ.
ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು ಹಗರಣದ ತನಿಖೆಗೆ ಪಟ್ಟು ಹಿಡಿದರು.ಗದ್ದಲದ ಹಿನ್ನೆಲೆಯಲ್ಲಿ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು.
ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಇಂದಿನಿಂದ ರಾತ್ರಿಯಿಡೀ ಧರಣಿ ನಡೆಸಲಿರುವುದಾಗಿ ಘೋಷಣೆ ಮಾಡಿದರು.
ದಲಿತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಸಿಎಂ ಕುಟುಂಬಕ್ಕೆ ನೀಡಿದ ಸೈಟ್ ವಾಪಸ್ ಪಡೆಯಬೇಕು. ಸುಮಾರು ಐದು ಸಾವಿರ ನಿವೇಶನಗಳನ್ನು ಮನಬಂದಂತೆ ಹಂಚಲಾಗಿದೆ. ಅದು ಕೂಡಾ ವಾಪಸ್ ಬರಬೇಕು. ಈ ಹಿನ್ನೆಲೆಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು