ಮುನ್ನಡೆಯ ಹಾದಿಯಲ್ಲಿ ಎನ್‌ಡಿಎ ಬಣ- ಉತ್ತರ ಪ್ರದೇಶದಲ್ಲಿ ಬಿಜೆಪಿ- ಎಸ್‌ಪಿ ಪೈಪೋಟಿ

ಬೆಂಗಳೂರು:ರಾಜ್ಯದ 28 ಕ್ಷೇ ತ್ರಗಳೂ ಸೇ ರಿ ದೇಶದ 542 ಕ್ಷೇ ತ್ರಗಳಲ್ಲಿ ಕಣಕ್ಕಿಳಿದಿದ್ದ 8,360 ಅಭ್ಯರ್ಥಿ ಗಳ ಮಧ್ಯಾಹ್ನದ ವೇ ಳೆಗೆ ನಿರ್ಧಾರವಾಗಲಿದೆ. ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಅಮೇ ಠಿಯಲ್ಲಿ ಕಿಶೋ ರಿ ಲಾಲ್ ಶರ್ಮಾ ಎದುರು 19,177 ಮತಗಳ ಹಿನ್ನಡೆಯಾಗಿದೆ. ಆರಂಭಿಕ ಹಿನ್ನಡೆ ಅನುಭವಿಸಿದ್ದ ಪ್ರಧಾನಿ ನರೇಂದ್ರ ಮೋದಿ, ವಾರಾಣಸಿ ಕ್ಷೇ ತ್ರದಲ್ಲಿ ಮುನ್ನಡೆಯ ಮುನ್ನುಗ್ಗುತ್ತಿದ್ದಾರೆ. ಕಾಂಗ್ರೆಸ್ನ ಅಜಯ್ ರಾಯ್ ಎದುರು 21,629 ಮತಗಳ
ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಿಪಿಐ ನಾಯಕ ಅಣ್ಣೈ ರಾಜಾ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರು ರಾಹುಲ್ಗೆ ಪೈಪೋಟಿ ನೀಡುತ್ತಿದ್ದಾರೆ.

ಖಾಲಿಸ್ತಾನಿ ಪ್ರತ್ಯೇ ಕವಾದಿ ನಾಯಕ ಅಮೃತ್ಪಾಲ್ ಸಿಂ ಗ್, ಖದೂರ್ ಸಾಹಿಬ್ ಕ್ಷೇ ತ್ರದಲ್ಲಿ ಕಾಂಗ್ರೆಸ್ ಕುಲ್ಬೀರ್ ಸಿಂ ಗ್ ಝರಾ ಎದುರು 30,987 ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ.

Advertisement

ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಮಾಜಿ ಮುಖ್ಯಮಂ ತ್ರಿ ಚರಣ್ಜಿತ್ ಸಿಂ ಗ್ ಚನ್ನಿ ಅವರು ಬಿಜೆಪಿಯ ಸುಶೀಲ್ ರಿಂಕು ಎದುರು ಜಲಂಧರ್ನಲ್ಲಿ 38,642 ಮತಗಳ ಮುನ್ನಡೆ ಕಾಯ್ದುಗೊಂಡಿದ್ದಾರೆ. ಮಧ್ಯಪ್ರದೇ ಶದ ಛಿಂದ್ವಾರ ಕ್ಷೇ ತ್ರದಲ್ಲಿ ಕಾಂ ಗ್ರೆಸ್ ಸಂ ಸದ ನಕುಲ್ ನಾಥ್ ಹಿನ್ನಡೆ ಅನುಭವಿಸಿದ್ದಾರೆ.ಮಾಜಿ ಮುಖ್ಯಮಂ ತ್ರಿ ಕಮಲನಾಥ್ ಅವರ ಪುತ್ರ ನಕುಲ್ಗೆ ಬಿಜೆಪಿಯ ವಿವೇ ಕ್ ಬಂಟಿ ಸಾಹು ಎದುರು 3,806 ಮತಗಳ ಹಿನ್ನಡೆ ಎದುರಾಗಿದೆ.

ಕಮಲನಾಥ್ ಹಾಗೂ ಕಾಂ ಗ್ರೆಸ್ನ ಭದ್ರ ಕೋ ಟೆ ಎನಿಸಿರುವ ಈ ಕ್ಷೇ ತ್ರವನ್ನು ಗೆಲ್ಲಲೇ ಬೇ ಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ, ಚುನಾವಣಾ ಪೂರ್ವ ದಲ್ಲಿ ಭಾರಿ ಕಸರತ್ತು ನಡೆಸಿತ್ತು.ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀ ವ್ ಚಂದ್ರಶೇ ಖರ್ ಭಾರಿ ಪೈಪೋ ಟಿಯೊಡ್ಡಿದ್ದಾರೆ. ಇಬ್ಬರ ನಡುವೆ ಅತ್ಯಲ್ಪ ಮತಗಳ ಅಂತರದ ಹಾವು–ಏಣಿ ಆಟ ಆರಂಭದಿಂದಲೂ ನಡೆಯುತ್ತಿದೆ.ಚುನಾವಣಾ ಆಯೋ ಗದ ಇತ್ತೀ ಚಿನಮಾಹಿತಿ ಪ್ರಕಾರ ತರೂರ್ ಅವರು 2,000 ಮತಗಳ ಮುನ್ನಡೆ ಸಾಧಿಸಿದ್ದಾರೆ.

80 ಲೋ ಕಸಭಾ ಕ್ಷೇ ತ್ರಗಳಿರುವ ಉತ್ತರ ಪ್ರದೇ ದಲ್ಲಿ ಎನ್ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಗಳ ನಡುವೆ ಭಾರಿ ಪೈಪೋ ಟಿ ಏರ್ಪ ಟ್ಟಿದೆ.
ಸದ್ಯ 70 ಕ್ಷೇ ತ್ರಗಳ ಅಂ ಕಿ–ಅಂ ಶ ಲಭ್ಯವಾಗಿದ್ದು, ಈ ಪೈ ಕಿ ಎನ್‌ಡಿ ಬಣದ ಬಿಜೆಪಿ 34 ಕಡೆ ಮೇಲುಗೈ ಸಾಧಿಸುತ್ತಿದೆ. ಇಂಡಿಯಾಕೂಟದ ಎಸ್ಪಿ ಹಾಗೂ ಕಾಂ ಗ್ರೆಸ್ ಕ್ರಮವಾಗಿ 30 ಮತ್ತು 6 ಸ್ಥಾನಗಳಲ್ಲಿ ಮುನ್ನಡೆ ಗಳಿಸುತ್ತಿವೆ.ಒಡಿಶಾದಲ್ಲಿ ಬಿಜೆಡಿ – ಬಿಜೆಪಿ ಪೈಪೋಟಿ ಇದೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement