ಮುಸ್ಲಿಂ ಪರುಷರು ಎಷ್ಟು ಮದುವೆ ಆಗಬಹುದು.? ಬಾಂಬೆ ಹೈಕೋರ್ಟ್ ಹೇಳಿದ್ದೇನು.?

WhatsApp
Telegram
Facebook
Twitter
LinkedIn

 

 

ಮುಂಬೈ: ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಮದುವೆಯಾಗಿ ವಿವಾಹ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಮುಸ್ಲಿಂ ವೈಯಕ್ತಿಕ ಕಾನೂನುಗಳು ಮದುವೆಗೆ ಅವಕಾಶ ಮಾಡಿಕೊಡುತ್ತವೆ ಎಂದು ಮೂರನೇ ವಿವಾಹ ನೋಂದಣಿ ಮಾಡಿಸಲು ಬಯಸಿದ್ದ ಪುರುಷನೊಬ್ಬನ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಹೇಳಿಕೆ ನೀಡಿದೆ.

ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಾಬಾವಾಲಾ ಮತ್ತು ಸೋಮಶೇಖರ್ ಸುಂದರೇಶನ್ ಅವರಿದ್ದ ವಿಭಾಗೀಯ ಪೀಠ ಅಕ್ಟೋಬರ್ 15ರಂದು ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಮದುವೆಯಾಗಿ ವಿವಾಹ ನೋಂದಣಿ ಮಾಡಿಸಿಕೊಳ್ಳಲು ವೈಯಕ್ತಿಕ ಕಾನೂನುಗಳು ಅವಕಾಶ ಮಾಡಿಕೊಡುತ್ತವೆ ಎಂದು ತಿಳಿಸಿದೆ.

ಆಲ್ಜೀರಿಯಾದ ಮಹಿಳೆಯೊಬ್ಬರನ್ನು ಮದುವೆಯಾಗಿದ್ದ ವ್ಯಕ್ತಿ ಅದರ ನೋಂದಣಿ ಕೋರಿ ಕಳೆದ ವರ್ಷ ಫೆಬ್ರವರಿಯಲ್ಲಿ ಸಲ್ಲಿಸಿದ ಅರ್ಜಿ ಕುರಿತಾಗಿ ಠಾಣೆ ಮಹಾನಗರ ಪಾಲಿಕೆ ಉಪ ವಿವಾಹ ನೋಂದಣಿ ಅಧಿಕಾರಿಗೆ ತೀರ್ಮಾನ ಕೈಗೊಳ್ಳುವಂತೆ ಪೀಠ ಸೂಚನೆ ನೀಡಿದೆ.

ಇದು ಪುರುಷನ ಮೂರನೇ ಮದುವೆಯಾಗಿರುವ ಕಾರಣ ವಿವಾಹ ನೋಂದಣಿ ಅರ್ಜಿ ತಿರಸ್ಕರಿಸಲಾಗಿದೆ. ವಿವಾಹ ಪ್ರಮಾಣ ಪತ್ರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ದಂಪತಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಮಹಾರಾಷ್ಟ್ರ ವೈವಾಹಿಕ ಸಂಸ್ಥೆಗಳ ನಿಯಂತ್ರಣ ಮತ್ತು ವಿವಾಹ ನೋಂದಣಿ ಕಾಯ್ದೆಯ ಪ್ರಕಾರ ಮದುವೆ ಒಂದು ಬಾರಿಗೆ ಮಾತ್ರ ಆಗುವಂತದ್ದು, ಹಲವು ಬಾರಿ ಆಗುವಂಥದ್ದಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ದಂಪತಿಯ ವಿವಾಹ ನೋಂದಣಿಗೆ ನಿರಾಕರಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ, ಮುಸ್ಲಿಮರ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಒಂದೇ ಬಾರಿಗೆ ನಾಲ್ವರು ಪತ್ನಿಯರನ್ನು ಹೊಂದಲು ಪುರುಷರಿಗೆ ಅವಕಾಶವಿದೆ ಎಂದು ಸ್ಪಷ್ಟಪಡಿಸಲಾಗಿದೆ.

 

BC Suddi   About Us
For Feedback - [email protected]

Related News

LATEST Post

WhatsApp Icon Telegram Icon