ಲಕ್ನೋ: ಕೋಮು ಸೌಹಾರ್ದತೆಯ ಸಾರುವ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೃಷ್ಟಿ ವಿಕಲಚೇತನ ಮುಸ್ಲಿಂ ಯುವಕನೋರ್ವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮುಂದೆ ಶ್ರೀರಾಮನ ಹಾಡು ಹಾಡಿದ್ದಾರೆ. ಗೋರಖ್‌ಪುರದಲ್ಲಿ ‘ಡಿವೈನ್ ಆರ್ಟ್ ಅಂಡ್ ಸ್ಕಿಲ್ಸ್ ಎಕ್ಸಿಬಿಷನ್’ ಉದ್ಘಾಟನೆ ವೇಳೆ ಸಿಎಂ ಯೋಗಿ ಅವರು ವಿಶೇಷಚೇತನರಿಗೆ ತ್ರಿಚಕ್ರ ವಾಹನಗಳು ಮತ್ತು ಪರಿಕರಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಯುವಕ ರಾಮಚರಿತಮಾನಸ್‌ನ “ರಾಮ್ ಸೀತಾ ರಾಮ್, ಸೀತಾ ರಾಮ್ ಜೈ ಜೈ ರಾಮ್” ಎಂಬ ಪದ್ಯವನ್ನು ಇತರ ಸಂಸ್ಕೃತ ಶ್ಲೋಕಗಳೊಂದಿಗೆ ದೋಷರಹಿತವಾಗಿ ಪಠಿಸಿದ್ದಾರೆ. ಇದರಿಂದ ಫುಲ್ ಖುಷ್ ಆದ ಸಿಎಂ ಯೋಗಿ ಅವರು, “ನೀವು ನನಗೆ ತುಂಬಾ ಆಹ್ಲಾದಕರವಾದ ಆಶ್ಚರ್ಯವನ್ನು ನೀಡಿದ್ದೀರಿ. ನಿಮಗೆ ಸಂಸ್ಕೃತ ಮತ್ತು ಹಿಂದಿಯಲ್ಲಿ ಉತ್ತಮ ಹಿಡಿತವಿದೆ, ಇದು ಶ್ಲಾಘನೀಯವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.