ಈ ರೋಗಕ್ಕೆ ಮುಖ್ಯ ಕಾರಣ ಮಲಬದ್ಧತೆ ಎಂದು ತಜ್ಞರು ಹೇಳುತ್ತಾರೆ. ಮೂಲವ್ಯಾಧಿಗೆ ಇನ್ನುಳಿದ ಕಾರಣಗಳೇನೆಂದರೆ ಅತಿಯಾಗಿ ಒತ್ತಡ ಹಾಕಿ ಮಲವಿಸರ್ಜನೆ ಮಾಡುವುದು, ಅಸಮತೋಲನ ಜೀವನ ಶೈಲಿ, ಜೀರ್ಣ ಕ್ರಿಯೆಗೆ ಕಷ್ಟವಾದ ಆಹಾರಗಳ ಹೆಚ್ಚು ಸೇವನೆ. ಉದಾಹರಣೆಗೆ ಹೆಚ್ಚು ಮಾಂಸದ ಊಟ ಮಾಡುವುದು. ನಿದ್ರಾಹೀನತೆ, ಸದಾ ಕೂತು ಕೆಲಸ ಮಾಡುವುದು ಅಥವಾ ಯಾವುದೇ ದೈಹಿಕ ವ್ಯಾಯಾಮ ಇಲ್ಲದೇ ಇರುವುದು ಹಾಗು ಹೆಚ್ಚು ನೀರು ಸೇವಿಸದೇ ಇರುವುದು, ಮಾನಸಿಕ ಒತ್ತಡ ಹೀಗೆ ಮೂಲವ್ಯಾಧಿ ರೋಗಕ್ಕೆ ಅನೇಕ ಕಾರಣಗಳಿವೆ. ಈ ರೋಗಕ್ಕೆ ಪರಿಹಾರವಾಗಿ ಅನೇಕ ಮನೆಮದ್ದುಗಳಿವೆ, ಅವುಗಳೆಂದರೆ.
ಮೂಲವ್ಯಾಧಿಯಿಂದ ಬಳಲುತ್ತಿರುವವರು ತಮ್ಮ ದೇಹವನ್ನು ಹೆಚ್ಚು ಊಷ್ಣವಾಗಲು ಬಿಡಬಾರದು. ಹೆಚ್ಚು ನೀರು ಸೇವಿಸಿದರೆ ಮೂಲವ್ಯಾಧಿ ಬರುವ ಸಾಧ್ಯತೆ ಕಡಿಮೆ. ಮೂಲವ್ಯಾಧಿಗೆ ಮೂಲಂಗಿ ಸೇವನೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಪ್ರತಿನಿತ್ಯ ನಿಮ್ಮ ಊಟದಲ್ಲಿ ಮೂಲಂಗಿ ಇರುವಂತೆ ನೋಡಿಕೊಳ್ಳಿ. ಕನಿಷ್ಟ ಪಕ್ಷ ದಿನದಲ್ಲಿ ಎರಡು ಬಾರಿ ಹಸಿ ಮೂಲಂಗಿಯಾದರೂ ಸೇವಿಸಬೇಕು. ಮೂಲಂಗಿ ದೇಹಕ್ಕೆ ತಂಪು
ದಾಳಿಂಬೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಕುದಿಸಿರಿ. ನೀರು ಆರಿದ ಬಳಿಕ ದಿನಕ್ಕೆ ಎರಡು ಬಾರಿ ಈ ನೀರನ್ನು ಸೇವಿಸಿ. ರಾತ್ರಿ ನೀರಿನಲ್ಲಿ ಒಣ ಅಂಜೂರ ಹಣ್ಣನ್ನು ನೆನಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ಅಂಜೂರ ಸೇವಿಸಿ. ಮೂಲವ್ಯಾಧಿಯ ಉರಿ ಕಡಿಮೆಯಾಗಲು ತಿಳಿ ಮಜ್ಜಿಗೆಗೆ ಕಲ್ಲುಪ್ಪು, ಸ್ವಲ್ಪ ಶುಂಠಿ ಪೇಸ್ಟ್ ಹಾಕಿ ದಿನಕ್ಕೆ ಎರಡು ಬಾರಿ ಸೇವಿಸಿ. ಒಂದು ಚಮಚ ನಿಂಬೆ ರಸಕ್ಕೆ ಶುಂಠಿ ರಸ ಬೆರಸಿ ಅದಕ್ಕೆ ಪುದಿನಾ ಎಲೆಯ ರಸ ಹಾಗು ಜೇನುತುಪ್ಪ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ದಿನಕ್ಕೆ ಮೂರು ಬಾರಿ ಸೇವಿಸಿ.
ಹಾಗಲಕಾಯಿ ರಸಕ್ಕೆ ಮಜ್ಜಿಗೆ ಬೆರಸಿ ಸೇವಸಿ ಮತ್ತು ಚೆನ್ನಾಗಿ ಮಾಗಿದ ಬಾಳೆಹಣ್ಣಿಗೆ ಹಾಲು ಬೆರಸಿ ಸೇವಿಸಿದರೆ ಮೂಲವ್ಯಾಧಿಯ ನೋವು ನಿವಾರಣೆಯಾಗುತ್ತದೆ. ಮೂಲವ್ಯಾಧಿ ಪೀಡಿದ ಜಾಗಕ್ಕೆ ಉರಿ ಹೆಚ್ಚಾಗಿರುತ್ತದೆ ಆ ಜಾಗಕ್ಕೆ ಶುಭ್ರವಾದ ತೆಂಗಿನ ಎಣ್ಣೆ ಹಚ್ಚಿ. ಇದರಿಂದ ತುರಿಕೆ ಉರಿ ನಿವಾರಣೆಯಾಗುತ್ತದೆ. ಹಾಗು ಈರುಳ್ಳಿ ರಸಕ್ಕೆ ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರಸಿ ದಿನಕ್ಕೆ ಮೂರಿ ಬಾರಿ ಸೇವಿಸಿ
ಮೂಲವ್ಯಾಧಿಯಿಂದ ಬಳಲುತ್ತಿರುವವರು ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ. ಇವುಗಳನ್ನು ಉಪಯೋಗಿಸಿದ ಮೇಲೆಯೂ ನಿಮಗೆ ಮೂಲವ್ಯಾಧಿ ಹೆಚ್ಚಾದರೆ ತಕ್ಕ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.