ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರ ಮನಗೆದ್ದಿದ್ದ ನಟಿ ಮಯೂರಿ ಕ್ಯಾತರಿ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಕಿರುತೆರೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಹೊಂದಿದ್ದ ಮಯೂರಿ ಅಶ್ವಿನಿ ನಕ್ಷತ್ರ ಧಾರಾವಾಹಿ ಬಳಿಕ ಇಷ್ಟ ಕಾಮ್ಯ ಹಾಗೂ ಕೃಷ್ಣ ಲೀಲಾ ಸಿನಿಮಾಗಳ ಮೂಲಕ ಬೆಳ್ಳಿತೆರೆ ಮೇಲೆ ಕೂಡ ಮಿಂಚಿದ್ದರು.
ವೈಯಕ್ತಿಯ ಜೀವನದ ಕಾರಣ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಮಯೂರಿ ಕ್ಯಾತರಿ ಮತ್ತೆ ನನ್ನ ದೇವ್ರು ಧಾರಾವಾಹಿ ಮೂಲಕ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಮಯೂರಿ ಕಂಬ್ಯಾಕ್ ಬಗ್ಗೆ ಕಿರುತೆರೆ ಪ್ರೇಕ್ಷಕರು ಕೂಡ ಕಾತುರರಾಗಿದ್ದಾರೆ. ಈ ಮಧ್ಯ ಮಯೂರಿ ತಮ್ಮ ಪತಿ ಅರುಣ್ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎನ್ನುವ ಅಂತೆ-ಕಂತೆಯ ಸುದ್ದಿಗಳು ಹರಿದಾಡಲು ಆರಂಭವಾಗಿತ್ತು.
ಈ ಬಗ್ಗೆ ಸ್ವತಃ ಮಯೂರಿ ಕ್ಯಾತರಿ ಅವರೇ ಸ್ಪಷ್ಟನೆ ನೀಡಿದ್ದು, ಮೆದುಳು, ಮನಸು, ದೇಹ ಜೀವನದಲ್ಲಿ ಎಲ್ಲವೂ ಚೆನ್ನಾಗಿದೆ. ನಾನಂತೂ ಖುಷಿಯಾಗಿದ್ದೇನೆ ಎಂದಿದ್ದಾರೆ.
ನನ್ನ ದೇವ್ರು ಧಾರಾವಾಹಿ ಲಾಂಚಿಂಗ್ ಕಾರ್ಯಕ್ರಮದಲ್ಲಿ ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ ನಟಿ ಮಯೂರಿ, ಡಿವೋರ್ಸ್ ಬಗ್ಗೆ ಗಾಳಿ ಸುದ್ದಿ ಹಬ್ಬಿಸುವವರಿಗೆ, ಕೆಟ್ಟ ಕಮೆಂಟ್ ಮಾಡುವವರಿಗೆ ಏನಾದರೂ ಹೇಳುವ ಅವಶ್ಯಕತೆ ಇದೆಯಾ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನನ್ನ ಜೀವನ ಚೆನ್ನಾಗಿದೆ. ನಾನು ಖುಷಿಯಾಗಿದ್ದೇನೆ. ಕೇಳುವವರು ಕೆಟ್ಟವರಲ್ಲ. ಅವರು ಒಂದು ಆಲೋಚನೆಯಲ್ಲಿ ಕೇಳಿರಬಹುದು. ನಾನು ಆ ತರದವಳಲ್ಲ. ನಾನು ತುಂಬಾ ಪಾಸಿಟಿವ್ ಮನಸ್ಥಿತಿಯವಳು. ನಾನು ಯಾರ ವೈಯಕ್ತಿಕ ವಿಚಾರದ ಬಗ್ಗೆ ಕೇಳಲ್ಲ ಎಂದರು.
ನಾನಂತೂ ತುಂಬಾ ಖುಷಿಯಾಗಿದ್ದೇನೆ. ಮೆದುಳು, ಮನಸು, ದೇಹ ಜೀವನದಲ್ಲಿ ಎಲ್ಲವೂ ಚೆನ್ನಾಗಿದೆ. ದಾಂಪತ್ಯ ಜೀವನದಲ್ಲಿ ನಾನು ಖುಷಿಯಾಗಿದ್ದೇನೆ. ಎಲ್ಲವೂ ಚೆನ್ನಾಗಿದೆ. ನಾನು ಎಲ್ಲಿಯೂ ಹೇಳಿಕೊಂಡಿಲಲ್ಲಾ, ಈಗ ಹೇಗಾಗಿದೆ ಎಂದರೆ ಒಂದು ಕಾಲು ಮುಂದೆ ಇಟ್ಟರೂ ಹೇಳುತ್ತಾರೆ. ಹಿಂದೆ ಇಟ್ಟರೂ ಹೇಳುತ್ತಾರೆ. ಅಂತವರಿಗೆಲ್ಲಾ ಏನೂ ಹೇಳಲು ಆಗುವುದಿಲ್ಲ. ನಾವೆಲ್ಲಾ ಖುಷಿಯಾಗಿದ್ದೇವೆ. ಎಲ್ಲವೂ ಚೆನ್ನಾಗಿದೆ ಎಂದು ಮಯೂರಿ ಸ್ಪಷ್ಟನೆ ನೀಡಿದ್ದಾರೆ.