ಬೆಂಗಳೂರು: ರಾಜ್ಯ ಪಠ್ಯಕ್ರಮದ ಎಲ್ಲ ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಮೇ 29ರಿಂದ ಪುನರಾರಂಭವಾಗಲಿವೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2024–25ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, 18 ದಿನಗಳು ದಸರಾ ರಜೆ, 48 ದಿನಗಳು ಬೇಸಿಗೆ ರಜೆ ನೀಡಿದೆ. ಒಟ್ಟು 244 ದಿನಗಳನ್ನು ಶಾಲಾ ಕರ್ತವ್ಯದ ದಿನಗಳೆಂದು ನಿಗದಿ ಮಾಡಲಾಗಿದೆ. ಮಕ್ಕಳು ಹಾಗೂ ಶಿಕ್ಷಕರಿಗೆ 121 ದಿನಗಳ ಒಟ್ಟಾರೆ ರಜೆ ದೊರಕಲಿದೆ.
ಶಾಲಾ ಅವಧಿಯ 244 ದಿನಗಳಲ್ಲಿ ಬೋಧನೆ ಹಾಗೂ ಕಲಿಕಾ ಪ್ರಕ್ರಿಯೆಗೆ 180 ದಿನಗಳು, ಪರೀಕ್ಷೆ ಹಾಗೂ ಮೌಲ್ಯಾಂಕನ ಕಾರ್ಯಕ್ಕಾಗಿ 26, ಪಠ್ಯೇತರ ಚಟುವಟಿಕೆಗಳಿಗೆ 24, ಫಲಿತಾಂಶ ವಿಶ್ಲೇಷಣೆಗಾಗಿ 10 ದಿನಗಳನ್ನು ಮೀಸಲಿಡಲಾಗಿದೆ. ಉಳಿದ 4 ದಿನಗಳನ್ನು ಸ್ಥಳೀಯ ರಜೆಗಳಾಗಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ.
(ಸಾಂದರ್ಭಿಕ ಚಿತ್ರ)