ಬ್ರೆಜಿಲ್: ಮೈಕ್ರೋಸಾಫ್ಟ್‌ನ ಮಾಜಿ ಸಿಇಒ ಬಿಲ್ ಗೇಟ್ಸ್ ಬ್ರೆಜಿಲ್ ನಲ್ಲಿ ಒಳಚರಂಡಿಗೆ ಇಳಿಯುತ್ತಿರುವ ದೃಶ್ಯ ಕಂಡುಬಂದಿದೆ. ವಿಶ್ವ ಶೌಚಾಲಯ ದಿನದ ಸಂದರ್ಭದಲ್ಲಿ ಬ್ರೆ ಜಿಲ್ ನ ಭೂಗತವಾಗಿದ್ದ ತ್ಯಾಜ್ಯ ವ್ಯವಸ್ಥೆಯ ಇತಿಹಾಸವನ್ನು ಅರಿಯಲು ಅವರು ಒಳಚರಂಡಿಗೆ ಇಳಿದಿದ್ದಾರೆ.
ಈ ಬಗ್ಗೆ ವಿಡಿಯೊವನ್ನು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಈ ವರ್ಷ ವಿಶ್ವ ಶೌಚಾಲಯ ದಿನದ ಪ್ರಯುಕ್ತ ಬ್ರೆಜಿಲ್ ಒಳಚರಂಡಿಗೆ ಇಳಿದು ಒಳಚರಂಡಿ ವ್ಯ ವಸ್ಥೆಯ ಗುಪ್ತ ಇತಿಹಾಸವನ್ನು ಪರಿಶೋಧಿಸಲು ಪ್ರಯತ್ನಿಸಿದೆ. ಜಾಗತಿಕ ಆರೋಗ್ಯದಲ್ಲಿ ತ್ಯಾಜ್ಯ ನೀರಿನ ನಿರ್ವಹಣೆಯ ಪಾತ್ರ ವನ್ನು ಅನ್ವೇಷಿಸಿದೆ. 18ನೇ ಶತಮಾನದಲ್ಲಿ ಚರಂಡಿ ನೀರನ್ನು ನೇರವಾಗಿ ಸೆನ್ನೆ ನದಿಗೆ ಹರಿಸಲಾಗಿತ್ತು . ಇದು ಕಾಲರಾದಂತಹ ಭೀಕರ ಸಾಂಕ್ರಮಿಕ ರೋಗ ಹರಡಲು
ಕಾರಣವಾಗಿತ್ತಂತೆ. ಇಂದು ಒಳಚರಂಡಿ ಮತ್ತು ಸಂಸ್ಕ ರಣಾ ಘಟಕಗಳು ನಗರದ ತ್ಯಾ ಜ್ಯ ನೀರನ್ನು ಸಂಸ್ಕರಿಸುತ್ತಿವೆ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ. ಪ್ರತಿ ವರ್ಷ, ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು 2001 ರಲ್ಲಿ ಸಿಂಗಾಪುರದ ಲೋಕೋಪಕಾರಿ ಜ್ಯಾಕ್ ಸಿಮ್ ಅವರ ಲಾಭರಹಿತ ಸಂಸ್ಥೆಯಾದ ವರ್ಲ್ಡ್ ಟಾಯ್ಲೆಟ್ ಆರ್ಗನೈಸೇಶನ್ ಹುಟ್ಟುಹಾಕಿದೆ.