ಚಿತ್ರದುರ್ಗ : ಮೈಲಾರ ಲಿಂಗೇಶ್ವರಸ್ವಾಮಿ ಕೇವಲ ಕರ್ನಾಟಕದಲ್ಲಷ್ಟೆ ಅಲ್ಲ. ದಕ್ಷಿಣ ಭಾರತದ ಹಲವು ಜಿಲ್ಲೆಗಳಲ್ಲಿ ಪ್ರಸಿದ್ದಿ ಪಡೆದಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಸ್ವಾಮೀಜಿ ಗುಣಗಾನ ಮಾಡಿದರು.
ಮೈಲಾರ ಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಅಭಿವೃದ್ದಿ ಸಮಿತಿಯಿಂದ ಬುರುಜಿನಹಟ್ಟಿ ಉಪ್ಪುನೀರು ಬಾವಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಮೈಲಾರ ಲಿಂಗೇಶ್ವರ ಸ್ವಾಮಿ ಗಂಗಮಾಳಮ್ಮ ದೇವಿಯ ದೇವಸ್ಥಾನ ಹಾಗೂ ಸಮುದಾಯ ಭವನ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮೈಲಾರ ಲಿಂಗೇಶ್ವರಸ್ವಾಮಿ ದೇವಸ್ಥಾನ ಸುಂದರವಾಗಿ ನಿರ್ಮಾಣವಾಗಿರುವುದರ ಹಿಂದೆ ನಿಶಾನಿ ಕುಟುಂಬದವರ ಪರಿಶ್ರಮವಿದೆ. ಮೈಲಾರ ಕಾರ್ಣಿಕ ನಾಡಿನಾದ್ಯಂತ ಹೆಸರುವಾಸಿ. ದೋಣಿ ಸೇವೆಯಲ್ಲಿ ನಮ್ಮವರ ಪಾತ್ರ ದೊಡ್ಡದು ಎಂದು ಹೇಳಿದರು.
ಗೋವಿಂದ ಕಾರಜೋಳರವರು ಚಿತ್ರದುರ್ಗ ಕ್ಷೇತ್ರದಿಂದ ಪಾರ್ಲಿಮೆಂಟ್ ಚುನಾವಣೆಗೆ ನಿಂತು ಗೆಲ್ಲುತ್ತಾರೆಂದು ಯಾರು ನಿರೀಕ್ಷಿಸಿರಲಿಲ್ಲ. ಬಿ.ಎಸ್.ಯಡಿಯೂರಪ್ಪನವರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಮಾದಾರ ಚನ್ನಯ್ಯ ಮಠ ತಲೆ ಎತ್ತಲು ಸಂಸದರು ಕಾರಣ ಎಂದು ಸ್ಮರಿಸಿದರು.
ನಗರಸಭೆ ಅಧ್ಯಕ್ಷ ಸ್ಥಾನ ಹುಟ್ಟಿಕೊಂಡಿದ್ದೆ ಬುರುಜನಹಟ್ಟಿಯಿಂದ. ಎಲ್ಲಾ ಪಕ್ಷಗಳು ಇಲ್ಲಿವೆ. ಈ ಭಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಇ.ಸ್ವತ್ತಾಗಲಿ, ಖಾತೆ ಹೀಗೆ ಯಾವುದೇ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಪುರಾತತ್ವ ಇಲಾಖೆಯಿಂದ ಅನೇಕ ಸಮಸ್ಯೆಗಳಿವೆ. ಹಾಗಾಗಿ ಕೇಂದ್ರ ಸರ್ಕಾರದಲ್ಲಿ ಮಾತನಾಡಿ ಬುರುಜನಹಟ್ಟಿ ನಿವಾಸಿಗಳಿಗೆ ಸೌಲಭ್ಯ ದೊರಕಿಸಿಕೊಡುವಂತೆ ಸಂಸದ ಗೋವಿಂದ ಕಾರಜೋಳರವರಲ್ಲಿ ಸ್ವಾಮೀಜಿ ಮನವಿ ಮಾಡಿದರು.
ದೇವಸ್ಥಾನದ ಸಂಸ್ಥಾಪಕರಾದ ದಿ.ನಿಶಾನಿ ಲಕ್ಷ್ಮಮ್ಮ, ದಿ.ನಿಶಾನಿ ಮಲ್ಲಪ್ಪ ಇವರುಗಳ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ ಸಂಸದ ಗೋವಿಂದ ಕಾರಜೋಳರವರು ಪುರಾತತ್ವ ಇಲಾಖೆಯ ನಿಯಮವೇನಿದೆ ಎನ್ನುವುದನ್ನು ನೋಡಿಕೊಂಡು ಬುರುಜನಹಟ್ಟಿ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಇಲ್ಲಿಯವರೆಗೂ ಏನೇನು ದಾಖಲೆಗಳನ್ನು ಸಲ್ಲಿಸಿ ಪತ್ರ ವ್ಯವಹರಿಸಿದ್ದೀರಿ ಎನ್ನುವ ಮಾಹಿತಿ ಕೊಡಿ. ಮೈಲಾರಲಿಂಗೇಶ್ವರಸ್ವಾಮಿ ಗಂಗಮಾಳಮ್ಮ ದೇವಸ್ಥಾನ ಹಾಗೂ ಸಮುದಾಯ ಭವನ ಭವ್ಯವಾಗಿ ನಿರ್ಮಾಣವಾಗಿರುವುದು ಇಲ್ಲಿನ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ದೇವಸ್ಥಾನ ಕಾರ್ಯಕಾರಿ ಸಮಿತಿ ಅಧ್ಯಕ್ಷ ಜಿ.ಸಿ.ಸುರೇಶ್ಬಾಬು, ಪ್ರಧಾನ ಕಾರ್ಯದರ್ಶಿ ಎಂ.ನಿಶಾನಿ ಜಯಣ್ಣ, ಗೌರವಾಧ್ಯಕ್ಷ ಎಸ್.ಕೃಷ್ಣಮೂರ್ತಿ, ಉಪಾಧ್ಯಕ್ಷ ವಿಜಯಕುಮಾರ್ ಪಿ.ಎಸ್. ನಗರಸಭೆ ಅಧ್ಯಕ್ಷೆ ಸುಮಿತಾ ಈರುಳ್ಳಿರಘು, ಸದಸ್ಯೆ ಪಿ.ಕೆ.ಮೀನಾಕ್ಷಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಕಂದಿಕೆರೆ ಸುರೇಶ್ಬಾಬು ವೇದಿಕೆಯಲ್ಲಿದ್ದರು.
ನಿರ್ದೇಶಕರುಗಳಾದ ಎಂ.ಮಲ್ಲಿಕಾರ್ಜುನ್, ಚಂದ್ರಪ್ಪ, ಶಿವಕುಮಾರ್ ಪಿ.ಎಲ್. ನಿಶಾನಿ ಧನುಷ್, ಬಿ.ಎಂ.ನಾಗರಾಜ್ಬೇದ್ರೆ, ಉದಯರವಿ ಟಿ. ಕೆ.ಗೋಪಿನಾಥ್, ನಿಶಾನಿ ಮಾಲತೇಶ್, ಕುರುಬ ಸಮಾಜದ ಮುಖಂಡರುಗಳಾದ ಫೈಲ್ವಾನ್ ತಿಪ್ಪೇಸ್ವಾಮಿ, ಡಿ.ಕೆ.ಲೋಕೇಶಪ್ಪ ಸೇರಿದಂತೆ ಬುರುಜನಹಟ್ಟಿಯ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.