ಮೈಸೂರು: ಲೋಕಸಭಾ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಮೈಸೂರು ಬಿಟ್ಟು ಹೊರಗಡೆ ತೆರಳದಂತೆ ಮನೋರಂಜನ್ ಕುಟುಂಬಕ್ಕೆ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ನಮ್ಮ ಸೂಚನೆ ಬರುವವರೆಗೂ ಮೈಸೂರಿನಿಂದ ಹೊರಗಡೆ ತೆರಳಬೇಡಿ. ತೀರಾ ತುರ್ತು ಪರಿಸ್ಥಿತಿ ಇದ್ದರೆ ನಮ್ಮ ಗಮನಕ್ಕೆ ತಂದು ಅನುಮತಿಯ ಮೇಲೆ ತೆರಳಿ ಎಂದು ಹೇಳಲಾಗಿದೆ. ಅಲ್ಲದೇ ಮನೆಗೆ ಯಾವ ಸಂಬಂಧಿಕರೂ ಬಾರದಂತೆ ಸೂಚನೆ ಕೊಡಿ, ಪ್ರತಿ ನಿತ್ಯ ನಿಮಗೆ ಬರುವ ಅನಾಮಾದೇಯ ಕರೆಗಳ ಮಾಹಿತಿಯನ್ನ ನೀಡಬೇಕು. ಎಲ್ಲಾ ಅನಾಮಧೇಯ ಕರೆಗಳನ್ನ ತಪ್ಪದೇ ಸ್ವೀಕರಿಸಿ ಎಂದು ಸಲಹೆ ನೀಡಿದ್ದಾರೆ.
ಇದರ ಜೊತೆಗೆ ನಮ್ಮ ಸೂಚನೆ ಬರುವವರೆಗೂ ಯಾವುದೇ ಪತ್ರಿಕೆ, ಹಳೇ ಪುಸ್ತಕ ಇದ್ಯಾವುದನ್ನ ಮಾರಕೂಡದು ಎಂದು ಮನೋರಂಜನ್ ಪೋಷಕರಿಗೆ ಗುಪ್ತಚರ ಇಲಾಖೆ ಸೂಚಿಸಿದೆ. ಲೋಕಸಭಾ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಮನೋರಂಜನ್ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.