ನವದೆಹಲಿ: ಭಾರತದ ಚಂದ್ರಯಾನ-3 ರ ಯಶಸ್ಸಿನ ನಂತರ ಇಸ್ರೋದ ಸೂರ್ಯ ಮಿಷನ್ ಆಗಿರುವ ಆದಿತ್ಯ ಎಲ್-1 ನಿನ್ನೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿದ್ದು, ಬಾಹ್ಯಕಾಶದಲ್ಲಿ ನೌಕೆಯು ಸಾಮಾನ್ಯ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 245 ಕಿಮೀ x 22459 ಕಿಮೀ ವ್ಯಾಪ್ತಿಯ ಹೊಸ ಕಕ್ಷೆಗೆ ನೌಕೆ ತಲುಪಿದೆ.
ಸೆಪ್ಟೆಂಬರ್ 5 ರಂದು ಮಧ್ಯಾಹ್ನ 3 ಗಂಟೆಗೆ ಮತ್ತೊಂದು ಹಂತದಲ್ಲಿ ಫೈರಿಂಗ್ ನಡೆಸಲಾಗುವುದು ಎಂದು ಇಸ್ರೋ ಟ್ವೀಟ್ ಮಾಡಿ ತಿಳಿಸಿದೆ.
ಇನ್ನು ಆದಿತ್ಯ- ಎಲ್1 ಭೂಮಿಯ ಸುತ್ತ 16 ದಿನಗಳ ಕಾಲ ಸುತ್ತುತ್ತದೆ ಮತ್ತು ತನ್ನ ವೇಗವನ್ನು ನಿರಂತರವಾಗಿ ಹೆಚ್ಚಿಸುತ್ತದೆ. ಈ ಅವಧಿಯಲ್ಲಿ ಉಪಗ್ರಹದ ಕಕ್ಷೆಯನ್ನು 5 ಬಾರಿ ಬದಲಾಯಿಸಲಾಗುತ್ತದೆ ಎನ್ನಲಾಗಿದೆ.