ಭಾರತೀಯ ಪಂಜಾಬಿ ಕುವರಿ, 20 ವರ್ಷದ ಚೆಲುವೆ ರಚೇಲ್ ಗುಪ್ತಾಗೆ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2024ರ ಪ್ರಶಸ್ತಿ ಒಲಿದು ಬಂದಿದೆ.
ಭಾರತೀಯ ಚೆಲುವೆಯೊಬ್ಬಳು ಮೊದಲ ಬಾರಿಗೆ ಈ ಮುಕುಟವನ್ನು ಧರಿಸಿದ ಖ್ಯಾತಿ ಈಗ ರಚೇಲ್ ಗುಪ್ತಾ ಅವರದ್ದಾಗಿದೆ. ಅಕ್ಟೋಬರ್ 25 ರಂದು ಒಟ್ಟು 70 ದೇಶಗಳಿಂದ ಭಾಗಿಯಾಗಿದ್ದ ಚೆಲುವೆಯರ ಹಿಂಡುಗಳಲ್ಲಿ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಆಗಿ ಹೊರಹೊಮ್ಮಿದ್ದು ರಚೇಲ್ ಗುಪ್ತಾ
ಈ ಒಂದು ಐತಿಹಾಸಿಕ ಜಯ ಗುಪ್ತಾಗಗೆ ಮತ್ತೊಂದು ಗರಿ ಗ್ರಾಂಡ್ ಪಗೀಯಂಟ್ಸ್ ಚಾಯ್ಸ್ ಅವಾರ್ಡ್ನ್ನು ಕೂಡ ತಂದುಕೊಟ್ಟಿದೆ. ಈ ಹಿಂದೆ ಲಾರಾ ದತ್ತಾ 2000ನೇ ಇಸ್ವಿಯಲ್ಲಿ ಮಿಸ್ ಯುನಿವರ್ಸ್ ಮುಕುಟುವನ್ನು ಧರಿಸುವ ಮೂಲಕ ಭಾರತಕ್ಕೆ ಇಂತಹುದೇ ಹೆಮ್ಮೆಯನ್ನು ತಂದುಕೊಟ್ಟಿದ್ದರು.
ನಾವು ಭಾರತೀಯ ಇತಿಹಾಸದಲ್ಲಿಯೇ ಮೊದಲ ಬಾರಿ ಈ ಬಂಗಾರದ ಕಿರೀಟವನ್ನು ಗೆದ್ದಿದ್ದೇವೆ. ನನ್ನ ಮೇಲೆ ನಂಬಿಕೆಯಿಟ್ಟ ಎಲ್ಲರಿಗೂ ಧನ್ಯವಾದಗಳು. ನಾನು ಇದನ್ನು ಎಂದಿಗೂ ಮರೆಯುವುದಿಲ್ಲ . ನಾನು ಸದಾ ನೀವು ನೆನಪಿಸಿಕೊಳ್ಳುವ ರಾಣಿಯಾಗಿ ನಾನು ಇರುತ್ತೇನೆಂದು ಹೇಳಬಯಸುತ್ತೇನೆ ಎಂದು ರೇಚಾ ಗುಪ್ತಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.