ಬೆಂಗಳೂರು: ನಿಗಮ ಮಂಡಳಿ ಪಟ್ಟಿ ಅಂತಿಮಗೊಂಡಿದ್ದು, ಶೀಘ್ರದಲ್ಲಿಯೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಮಾಧ್ಯಮದೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವೆಲ್ಲರೂ ಕುಳಿತು ನಿಗಮ – ಮಂಡಳಿ ಅಧ್ಯಕ್ಷರ ಆಯ್ಕೆಯನ್ನು ಮಾಡಿದ್ದೇವೆ. ಪಟ್ಟಿ ಅಂತಿಮಗೊಂಡಿದ್ದು, ನಿಗಮ ಮಂಡಳಿ ನೇಮಕಾತಿಯಲ್ಲಿ ಮೊದಲ ಬಾರಿಗೆ ಶಾಸಕರಾದವರಿಗೆ ಹಾಗೂ ವಿಧಾನಸಭೆ ಚುನವಣೆಯಲ್ಲಿ ಟಿಕೆಟ್ ಪಡೆದವರಿಗೆ ಸ್ಥಾನ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳು, ಸುರ್ಜೇವಾಲಾ ಹಾಗೂ ನಾನು ಸೇರಿ ಚರ್ಚಿಸಿ ನಿಗಮ ಮಂಡಳಿ ಪಟ್ಟಿ ಅಂತಿಮ ಮಾಡಿದ್ದೇವೆ. ಸುರ್ಜೇವಾಲಾ ಹೈಕಮಾಂಡ್ ಬಳಿ ಪಟ್ಟಿ ತೆಗೆದುಕೊಂಡು ಹೋಗಿದ್ದಾರೆ. ಇಂದಿಗೆ ಅವರ ಚುನಾವಣಾ ಪ್ರಚಾರ ಕಾರ್ಯವೂ ಮುಗಿಯಲಿದ್ದು, ಹೀಗಾಗಿ ಆದಷ್ಟು ಬೇಗ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.
ನಿಗಮ ಮಂಡಳಿಯಲ್ಲಿ ನೂತನ ಶಾಸಕರಿಗೆ ಸ್ಥಾನ ಇಲ್ಲ. ಉಳಿದ ಶಾಸಕರಿಗೆ ಹಾಗೂ ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ ಸ್ಥಾನ ಕೊಡಲಾಗುತ್ತದೆ ಎಂದು ಹೇಳಿದರು