‘ಮೊಮ್ಮಗ 3ನೇ ಬಾರಿಗೆ ಸೋತುಬಿಡ್ತಾನೆ ಅಂತ ಅಳ್ತಿದ್ದಾರೆ’ – ಸಿಎಂ ಸಿದ್ದರಾಮಯ್ಯ

WhatsApp
Telegram
Facebook
Twitter
LinkedIn

ರಾಮನಗರ :ದೇವೇಗೌಡರೆ ಯಾಕೆ ಇಲ್ಲಿ ಬಂದು ಅಳ್ತೀರಾ? ನಿಮ್ಮ ಮೊಮ್ಮಗ ಹಾಸನದಲ್ಲಿ ನೂರಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ನಲ್ಲ ಅಲ್ಲಿ ಹೋಗಿ ಅಳಬೇಕು. ಇಲ್ಲಿ ಮೊಮ್ಮಗ 3ನೇ ಬಾರಿಗೆ ಸೋತುಬಿಡ್ತಾನೆ ಅಂತ ಬಂದು ಇಲ್ಲಿ ಅಳ್ತಾ ಇದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಆಯ್ತು ಈಗ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಅಳೋದು ಕಲ್ತಿದ್ದಾರೆ. ಅಳೋ ಗಂಡಸರನ್ನ ನಂಬಬಾರದಂತೆ. ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕೆಲಸ ಮಾಡಿದ್ದರೆ ಯಾಕೆ ಅಳಬೇಕು? ಕರುಳು ಹಿಂಡಿಬಿಡುತ್ತಂತೆ, ಯಾಕೆ ಹಾಸನದಲ್ಲಿ ಅತಿ ದೊಡ್ಡ ಲೈಂಗಿಕ ಹಗರಣ ಆದಾಗ ಯಾಕೆ ಅಳಲಿಲ್ಲಾ? ಅಲ್ಲಿ ದೇವೇಗೌಡರಿಗೆ, ನಿಖಿಲ್‌ಗೆ ಅಳು ಬರಲಿಲ್ಲ ಈಗ ಚನ್ನಪಟ್ಟಣದಲ್ಲಿ ಅಳು ಬರುತ್ತಾ? ಎಂದು ಟಾಂಗ್ ಕೊಟ್ಟಿದ್ದಾರೆ.

ನಾನು ರಾಜ ಕಾರಣಕ್ಕೆ ಬಂದು 40 ವರ್ಷಗಳು ಸಂದಿವೆ. ಒಂದೇ ಒಂದು ಕಪ್ಪು ಚುಕ್ಕಿ ನನ್ನ ಮೇಲೆ ಇಲ್ಲ. ಆದ್ರೆ ಈಗ ಬಿಜೆಪಿಯವರು ನನ್ನನ್ನ ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ನನ್ನನ್ನ ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧವೂ ಗುಡುಗಿದ್ದಾರೆ.

 

BC Suddi   About Us
For Feedback - [email protected]

Related News

LATEST Post

WhatsApp Icon Telegram Icon