ಅಡುಗೆ ಮನೆಯ ತರಕಾರಿಗಳಲ್ಲಿ ಆಲೂಗಡ್ಡೆಯು ಪ್ರಮುಖ ಪಾತ್ರ ವಹಿಸುತ್ತದೆ. ಆಲೂಗಡ್ಡೆಯಿಂದ ಬಹಳಷ್ಟು ಖಾದ್ಯಗಳನ್ನು ತಯಾರಿಸಬಹುದು.
ನೀವು ಮಾರ್ಕೆಟ್ ಗೆ ಹೋದ ಸಂದರ್ಭದಲ್ಲಿ ಆಲೂಗಡ್ಡೆಯನ್ನು ಆರಿಸಿಕೊಳ್ಳುವಾಗ ಅಲ್ಲೊಂದು ಇಲ್ಲೊಂದು ಮೊಳಕೆಯೊಡೆದ ಆಲೂಗಡ್ಡೆ ಇರುತ್ತವೆ. ಮನೆಯಲ್ಲಿ ಸಹ ಮೊಳಕೆಯೊಡೆದ ಆಲೂಗಡ್ಡೆ ಇರುತ್ತವೆ. ನೀವು ಏನ್ ಮಾಡ್ತೀರಾ.? ಮೊಳಕೆಯೊಡೆದ ಭಾಗವನ್ನು ಸ್ವಲ್ಪ ಕಟ್ ಮಾಡಿ ಬಳಿಕ ಆಲೂಗಡ್ಡೆಯನ್ನು ಅಡುಗೆ ಮಾಡಲು ಬಳಸುತ್ತೀರಾ. ಆದರೆ ಈ ರೀತಿ ಮಾಡುವುದು ತಪ್ಪು. ವೈದ್ಯರು ಹೇಳುವಂತೆ ಮೊಳಕೆಯೊಡೆದ ಅಥವಾ ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗಿದ ಆಲೂಗಡ್ಡೆಯನ್ನು ಸೇವಿಸಬಾರದಂತೆ. ಯಾಕೆಂದರೆ ಈ ರೀತಿ ಇರುವ ಆಲೂಗಡ್ಡೆಗಳಲ್ಲಿ ಸೋಲನೈನ್ ಮತ್ತು ಚಾಕೋನೈನ್ ಅಂಶ ಉತ್ಪತ್ತಿಯಾಗುತ್ತದೆ.
ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿ ವಿಷದಂತೆ ಪರಿಣಮಿಸುತ್ತದೆ. ಇದರಿಂದ ಅತಿಸಾರ, ವಾಕರಿಕೆ, ತಲೆನೋವು, ತಲೆ ಸುತ್ತು, ಹೊಟ್ಟೆ ನೋವು ಮತ್ತು ವಾಂತಿ ಲಕ್ಷಣಗಳು ಕಂಡುಬರುತ್ತವೆ. ಹಾಗಾಗಿ ಅಡುಗೆ ಮಾಡುವುದಕ್ಕಿಂತ ಮೊದಲು ಮೊಗ್ಗು ಅಥವಾ ಮೊಳಕೆಯೊಡೆದ ಹಸಿರು ಭಾಗವನ್ನು ತೆಗೆದುಹಾಕಿ ಬಳಕೆ ಮಾಡಿ. ಅಥವಾ ಆಲೂಗಡ್ಡೆ ಸಿಪ್ಪೆಯನ್ನು ತೆಗೆದುಹಾಕಿ ಬಳಸುವುದು ಉತ್ತಮ. ಇನ್ನೂ ಸಂಪೂರ್ಣವಾಗಿ ಬೇಯಿಸುವುದರಿಂದ ಆಲೂಗಡ್ಡೆಯಲ್ಲಿನ ಗ್ಲೈಕೋಲ್ಕಲಾಯ್ಡ್ ಅಂಶವು ಕಡಿಮೆಯಾಗುತ್ತದೆ.