ನವದೆಹಲಿ: ಮೋದಿ ಉಪನಾಮ ಪ್ರಕರಣದಲ್ಲಿ ನಾನು ತಪ್ಪಿಸ್ಥನಲ್ಲ ಹಾಗಾಗಿ ನಾನು ಕ್ಷಮೆ ಯಾಚಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ರಾಹುಲ್ ದೋಷಿ ಎಂದು ಗುಜರಾತ್ ನ್ಯಾಯಾಲಯ ನೀಡಿರುವ ತೀರ್ಪನ್ನು ವಜಾಗೊಳಿಸುವಂತೆ ಕೋರಿ ರಾಹುಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೇ, ಈ ಸಂಬಂಧಿಸಿದ ಅಫಿಡವಿಟ್ ಅನ್ನೂ ಸಲ್ಲಿಸಿದ್ದಾರೆ. ಈ ವೇಳೆ ತಾನು ಪ್ರಕರಣದಲ್ಲಿ ಕ್ಷಮೆಯಾಚಿಸಿ ಖುಲಾಸೆ ಮಾಡಿಕೊಳ್ಳಬೇಕಿದಿದ್ದರೆ, ಅದನ್ನು ಯಾವತ್ತೋ ಮಾಡುತ್ತಿದ್ದೆ. ಆದರೆ, ನಾನು ಇದರಲ್ಲಿ ದೋಷಿಯೇ ಅಲ್ಲ, ಹಾಗಿದ್ದಾಗ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ.
ಮೋದಿ ಎಂಬ ಸಮುದಾಯಕ್ಕೆ ನನ್ನ ಮಾತಿಂದ ನೋವುಂಟಾಗಿದೆ ಎಂಬುದು ಸರಿಯಲ್ಲ.ಮೋದಿ ಎನ್ನುವ ಸಮುದಾಯವೇ ಇಲ್ಲ. ಹೀಗಿರುವ ನನ್ನ ಮಾತು ನೋವುಂಟಾಗುವುದು ಹೇಗೆ. ಮೋದಿ ವನಿಕ ಸಮಾಜ್ ಹಾಗೂ ಮೋದಿ ಘಂಚಿ ಸಮಾಜ್ ಮಾತ್ರ ಇರುವುದು ಎಂದು ರಾಹುಲ್ ತಿಳಿಸಿದ್ದಾರೆ.