ದೆಹಲಿ: ಪ್ರಧಾನಿ ಮೋದಿ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯದೆ ಮುಂದಿನ ಚುನಾವಣೆಗಳನ್ನು ಮುಕ್ತವಾಗಿ ನಡೆಸಲು ಸಾಧ್ಯವಾಗಲ್ಲವೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ಈವರೆಗೆ ಶಾಸಕರು, ಸಂಸದರನ್ನು ಹೆದರಿಸುತ್ತಿತ್ತು. ಸದ್ಯ ಪಕ್ಷಗಳನ್ನೇ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಹೀಗೆಯೇ ಮುಂದುವರಿದರೆ ಸಂವಿಧಾನದ ಆಶಯದಂತೆ ಸರ್ಕಾರ ನಡೆಯಲ್ಲ. ಪ್ರಜಾಪ್ರಭುತ್ವವೂ ಉಳಿಯಲ್ಲ. ಪಕ್ಷಾಂತರಕ್ಕೆ ಸರ್ಕಾರವೇ ಎಡೆ ಮಾಡಿಕೊಡುತ್ತಿರುವುದು ಪ್ರಮಾದ ಎಂದಿದ್ದಾರೆ.