ಮೋದಿ ಮತ್ತೆ ಪ್ರಧಾನಿಯಾಗಲಿ- ಅಮರನಾಥ ಯಾತ್ರೆಯಲ್ಲಿ ಶೋಭಾ ವಿಶೇಷ ಪೂಜೆ

ಶ್ರೀನಗರ: ಮೋದಿ ಅವರು ಮತ್ತೆ ಪ್ರಧಾನಿಯಾಗಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಅಮರನಾಥ ಯಾತ್ರೆ ಕೈಗೊಂಡು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ವೀಡಿಯೋವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಂಚಿಕೊಂಡಿದ್ದಾರೆ. ಅಮರನಾಥ ದರ್ಶನ ಪಡೆದು ಧನ್ಯಳಾಗಿದ್ದೇನೆ. ದೇಶವಾಸಿಗಳ ಯೋಗಕ್ಷೇಮ ಮತ್ತು ನರೇಂದ್ರ ಮೋದಿ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಮತ್ತೆ ಪ್ರಧಾನಿಯಾಗಬೇಕು ಎಂದು ಪ್ರಾರ್ಥಿಸಿರುವುದಾಗಿ ಟ್ವೀಟ್‌ ಮಾಡಿದ್ದಾರೆ.

ಶ್ರೀ ಅಮರನಾಥದಲ್ಲಿರುವ ಪವಿತ್ರ ಶಿವಲಿಂಗದ ದರ್ಶನ ಪಡೆದೆ. ನನ್ನ ಯಾತ್ರೆಗೆ ಸಹಕಾರಿಯಾದ ಅಮರನಾಥ ದೇಗುಲ ಮಂಡಳಿಯ ಎಲ್ಲಾ ಸಿಬ್ಬಂದಿ ಮತ್ತು ಭದ್ರತಾ ತಂಡಕ್ಕೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದ್ದಾರೆ. ಎಲ್ಲರ ಸುಗಮ ಯಾತ್ರೆಗೆ ಅನುವು ಮಾಡಿಕೊಟ್ಟಿರುವ ಮನೋಜ್‌ ಸಿನ್ಹಾ ಅವರಿಗೆ ವಂದನೆಗಳು ಎಂದು ಶೋಭಾ ಕರಂದ್ಲಾಜೆ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement