ಬೆಂಗಳೂರು: ಮೋಹಕ ತಾರೆ, ನಟಿ ರಮ್ಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸದ್ಯ ರಮ್ಯಾ ಟ್ರೆಂಡ್ ಆಗಿದ್ದಾರೆ.
ಕಾಲಿವುಡ್ ಸಿನಿಮಾರಂಗ ನಟಿ ರಮ್ಯಾ ಎನ್ನುವವರು ನಿಧನರಾಗಿದ್ದು, ಇದೇ ಹೆಸರಿನೊಂದಿಗೆ ಕೆಲವರು ಕನ್ನಡದ ನಟಿ ರಮ್ಯಾ ಅವರ ಫೋಟೋವನ್ನು ಬಳಸಿಕೊಂಡು ಅವರು ನಿಧನರಾಗಿದ್ದಾರೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ಇನ್ನು ಸಿನಿಮಾರಂಗದ ಟ್ವಿಟರ್ ಪೇಜ್ ಗಳಾದ ಎಸ್ಎಸ್ ಸಂಗೀತ ಮತ್ತು ದಿನಕರನ್ ಅವರು ಕೂಡ ರಮ್ಯಾ ಅವರ ಫೋಟೋ ಹಂಚಿಕೊಂಡಿದ್ದರು.
ಈ ಸುಳ್ಳು ಸುದ್ದಿಯನ್ನು ಹಬ್ಬಿಸಿದ ತಮಿಳು ಮೀಡಿಯಾಗಳ ವಿರುದ್ದ ರಮ್ಯಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.