ಮೌಢ್ಯದ ಮುಕ್ತಿಯ ಬೆಳಕು “ಬುದ್ಧನ ಬೆಳಕು”

 

ಚಿತ್ರದುರ್ಗ: ಯುದ್ಧವೂಎಲ್ಲಾ ಕಾಲಕ್ಕೂ ಹಿಂಸೆಯನ್ನೇ ಬೋಧಿಸುತ್ತಧರ್ಮ, ಜಾತಿ, ವರ್ಗ, ವರ್ಣ, ಲಿಂಗ ತಾರತಮ್ಯಗಳನ್ನು ಸೃಷ್ಠಿ ಮಾಡುತ್ತ ಮನುಷ್ಯನ ನಡುವೆದೊಡ್ಡಕಂದಕವನ್ನೇ ಬಿತ್ತುತ್ತಲೇ ಬಂದಿವೆ. ಈ ಸತ್ಯವನ್ನುಕಂಡುಕೊಂಡ ಅಶೋಕ ಚಕ್ರವರ್ತಿಯು ಕಳಿಂಗ ಯುದ್ಧದ ನಂತರತನ್ನಿಂದಾದಅನಾಹುತಕ್ಕೆ ಬುದ್ಧಧಮ್ಮವನ್ನು ಸ್ವೀಕರಿಸಿದನು. ಈ ಸನ್ನಿವೇಶದಿಂದ ಪ್ರೇಕ್ಷಕ ವರ್ಗವನ್ನು ಹಿಡಿದಿಟ್ಟುಕೊಂಡ“”ಬುದ್ಧನ ಬೆಳಕು ನಾಟಕ” ನಗರದ ತ.ರಾ.ಸು ರಂಗಮಂದಿರದಲ್ಲಿ ಪ್ರದರ್ಶನವಾಯಿತು.

ಡಾ. ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಮಾನವ ಬಂಧುತ್ವ ವೇದಿಕೆಯ ಸಹಯೋಗದಲ್ಲಿ ಪ್ರದರ್ಶನಕಂಡ“ಬುದ್ಧನ ಬೆಳಕು” ನಾಟಕವುಕಿಕ್ಕಿರಿದಜನರಿಂದಕೂಡಿತ್ತು.ಗೌತಮನು ಬುದ್ಧನಾಗುವಕಡೆ ಸಾಗಿದದಾರಿಯಲ್ಲಿಧ್ಯಾನ, ಯೋಗ, ಉಪವಾಸಗಳಂತವನ್ನು ನಿರಾಕರಿಸಿ ಜ್ಙಾನ ಸಾಧನೆಗೆಜನರೊಂದಿಗೆ ಬೆರೆತ ಬುದ್ಧದುಃಖಕ್ಕೆಕಾರಣವಾದ ಬಗೆ ಹಾಗೂ ದುಃಖ ನಿವಾರಣೆಯ ಸಂಗತಿಗಳನ್ನು ಎಳೆಎಳೆಯಾಗಿ ಬಿಡಿಸಿತು.ಮನುಷ್ಯನ ಒಳತಿಗಾಗಿ ಶಾಂತಿಯನ್ನು ಮರುಸ್ಥಾಪಿಸುವ ಇಚ್ಛೆಯಿಂದರೋಹಿಣಿ ನದಿ ನೀರಿನ ಹಂಚಿಕೆಯ ಸಂಘರ್ಷದಿAದಅರಮನೆಯನ್ನುತೊರೆಯುವುದು ಬುದ್ಧನ ಮೇಲಿದ್ದಇದುವರೆಗಿನ ಮಿಥ್‌ಅನ್ನು ಹೊಡೆದು ಹಾಕಿತು.ಸಿದ್ಧಾರ್ಥ ಅರಮನೆತೊರೆಯುವುದು, ಸತ್ಯ ಶೋಧನೆಯ ಹುಡುಕಾಟ, ಯಜ್ಞಯಾಗಾದಿಗಳು, ಅಸ್ಪೃಶ್ಯತೆ, ಅಸಮಾನತೆ, ಲಿಂಗತಾರತಮ್ಯ ಮುಂತಾದ ಪರಂಪರೆಯ ಸಾಮಾಜಿಕ ಮಹಾರೋಗಗಳಿಗೆ, ಸಂಕಟಗಳಿಗೆ ತನ್ನರಿವಿನ ಬೆಳಕಿನ ಔಷಧಿಯನ್ನು ನೀಡುತ್ತ ಬಿಕ್ಕುಗಳನ್ನು ಹೊಂದುತ್ತ ಸಾಗುವ ಹಾದಿಗಳ ಘಟನೆಗಳು ಪ್ರೇಕ್ಷಕರನ್ನು ಮೂಕವಾಗಿಸಿತ್ತು.ಪ್ರತಿ ಸನ್ನಿವೇಶದಲ್ಲೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುತ್ತಲೇ ಬುದ್ಧನ ಸಮಾನತೆಯ ತತ್ವಗಳ ಬೋಧನೆ ಸಂವಿಧಾನದಲ್ಲಿರೂಪುಗೊAಡAತೆ ಭಾಸವಾಯಿತು.

Advertisement

ನಾಟಕದಲ್ಲಿ ಮುಟ್ಟಾದ ಹೆಂಗಸ್ಸಿನ ಪ್ರಸಂಗವನ್ನು ಪ್ರಕೃತಿಗೆ ಸಮೀಕರಿಸಿ ಹೇಳುವ ಪ್ರಸಂಗ, ಮೌಢ್ಯಾಚರಣೆ, ಅಸಂಬದ್ಧ ವಿಷಯಗಳಿಗೆ ಮದ್ದು ನೀಡುತ್ತ ಸಾಗುವ ಬುದ್ಧನ ಹಾದಿ ಪ್ರೇಕ್ಷಕರ ಪಾಲಿಗೆ ಅರಿವಿನ ತೇರನ್ನು ಎಳೆಯಿತು.ನಾಟಕದಕೊನೆಯ ಭಾಗದಲ್ಲಿಅಂಬೇಡ್ಕರ್ ಬೌದ್ಧಧಮ್ಮವನ್ನು ಸ್ವೀಕರಿಸುವುದು, ಕೆಳವರ್ಗ ಶ್ರಮಿಕಅಂಚಿನ ಸಮುದಾಯದಜಾಡಮಾಲಿಗೆಅಂಬೇಡ್ಕರ್ ಸಂವಿಧಾನಕೃತಿ ನೀಡಿಅಕ್ಷರದ ಮಹತ್ವವನ್ನು ಸಾರಿದಾರಿತೋರಿಸುವ ಸಾಂಕೇತಿಕದೃಶ್ಯ ಪ್ರೇಕ್ಷಕರಲ್ಲಿ ಶಿಳ್ಳೆ ಕೇಕೆಗಳ ಕರತಾಡನವೇತುಂಬಿತು.

ಒಟ್ಟಾರೆ ದೀಪಾವಳಿ ಸಂದರ್ಭದಲ್ಲಿ ದೀಪದ ಬೆಳಕಿಗೆ ಪರ್ಯಾಯವಾಗಿಅರಿವಿನ ಬೆಳಕಿಗೆ ಕಾರಣಕರ್ತರಾದಡಾ.ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆಯ ಸದಸ್ಯರುಗಳಾದ ವೇದಾಂತ ಏಳಂಜಿ, ಸಿದ್ದೇಶ್.ಕೆ., ಹನುಮಂತಪ್ಪ.ಜಿ, ಡಾ.ಸಂಜೀವಕುಮಾರ್ ಪೋತೆ, ಕುಮಾರ್ ಹೆಚ್, ಶ್ರೀನಿವಾಸರಾಜು, ಮಂಜುನಾಥಆರ್, ವಿಶ್ವಾನಂದ ವದ್ದಿಕೆರೆ, ಲಿಂಗೇಶ್ವರ್, ರಮೇಶ್, ಪರುಶರಾಮ್, ಶ್ರೀನಿವಾಸ್, ಡಾ.ಗಿರೀಶ್ ಮುಂತಾದವರು ಸೇರಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement