ಮ್ಯಾನ್ಮಾರ್: ಮ್ಯಾನ್ಮಾರ್ ನ ಗಣಿಯೊಂದರಲ್ಲಿ ಭೂಕುಸಿತ ಸಂಭವಿಸಿ, ಕನಿಷ್ಠ 25 ಜನರು ಸಾವನ್ನಪ್ಪಿ, 14 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಕಚಿನ್ ಪ್ರಾಂತ್ಯದ ಹಪಕಾಂತ ಪಟ್ಟಣದ ಹೊರವಲಯದಲ್ಲಿರುವ ಜೇಡ್ ಗಣಿಯಲ್ಲಿ ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಭೂಕುಸಿತ ಸಂಭವಿಸಿದೆ. ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಸುಮಾರು 180 ಮೀಟರ್ ಎತ್ತರದ ಗೋಡೆ ಕುಸಿದುಬಿದ್ದಿದೆ.
ಈ ಸ್ಥಳವು ಮ್ಯಾನ್ಮಾರ್ನ ಅತಿದೊಡ್ಡ ಪಟ್ಟಣವಾದ ಯಾಂಗೊನ್ನ ಉತ್ತರಕ್ಕೆ ಸುಮಾರು 950 ಕಿಲೋಮೀಟರ್ (600 ಮೈಲಿ) ದೂರದಲ್ಲಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಪ್ರದೇಶವು ವಿಶ್ವದ ಅತಿದೊಡ್ಡ ಮತ್ತು ಆಕರ್ಷಕ ಜೇಡ್ ಗಣಿಗಳ ಕೇಂದ್ರವಾಗಿದೆ.
ದುರಂತದ ಬಳಿಕ , ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ 25 ಮೃತದೇಹ ಪತ್ತೆಹಚ್ಚಲಾಗಿದೆ. ಇನ್ನೂ 14 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.