ಪೋಕ್ಸೋ ಕೇಸ್ನಲ್ಲಿ ಮಾಜಿ CM ಬಿಎಸ್ ಯಡಿಯೂರಪ್ಪನವರನ್ನು ಬಂಧಿಸುವ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿ, ಈ ಪ್ರಕರಣದಲ್ಲಿ ಯಡಿಯೂರಪ್ಪನವರನ್ನು ಅಗತ್ಯಬಿದ್ದರೆ ಸಿಐಡಿ ಪೊಲೀಸರು ಬಂಧಿಸಲಿದ್ದಾರೆ. ಯಡಿಯೂರಪ್ಪನವರು ನೋಟಿಸ್ಗೆ ಬಂದು ಉತ್ತರ ನೀಡಬೇಕಾಗುತ್ತದೆ. ಈ ಕೇಸ್ ಬಗ್ಗೆ ಜೂ.15ರೊಳಗೆ ಚಾರ್ಜ್ಶೀಟ್ ಸಲ್ಲಿಸಬೇಕಿದ್ದು,
ಈ ಕಾರಣಕ್ಕೆ ನೋಟಿಸ್ ನೀಡಲಾಗಿದೆ. ಹೀಗಾಗಿ ಬಂಧನದ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಜೂ.17ರಂದು ವಿಚಾರಣೆಗೆ ಹೋಗುವುದಾಗಿ ಬಿಎಸ್ವೈ ಹೇಳಿದ್ದಾರೆ.