ಯುಎಸ್ ಓಪನ್‌ : 24ನೇ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಪ್ರಶಸ್ತಿ ಮುಡಿಗೇರಿಸಿಕೊಂಡ ಜೊಕೊವಿಕ್

WhatsApp
Telegram
Facebook
Twitter
LinkedIn

ನ್ಯೂಯಾರ್ಕ್‌: ನೊವಾಕ್ ಜೊಕೊವಿಕ್ ಯುಎಸ್ ಓಪನ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದಾರೆ. ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ರಷ್ಯಾದ ಡೇನಿಯಲ್ ಮೆಡ್ವೆಡೆವ್ ವಿರುದ್ಧ 6-3, 7-6(7-5), 6-3 ಸೆಟ್‌ಗಳಿಂದ‌ ಗೆದ್ದು, ನಾಲ್ಕನೇ ಯುಎಸ್ ಓಪನ್ ಮತ್ತು 24ನೇ ಪ್ರಶಸ್ತಿಗೆ ಮುತ್ತಿಕ್ಕಿದರು.

ಈ ಮೂಲಕ ಆಧುನಿಕ ಟೆನಿಸ್‌ ಜಗತ್ತಿನಲ್ಲಿ ಸೆರೆನಾ ವಿಲಿಯಮ್ಸ್‌ (23 ಸಿಂಗಲ್ಸ್ ಟ್ರೋಫಿ) ಅವರ ಗ್ರ್ಯಾಂಡ್‌ ಸ್ಲ್ಯಾಮ್‌ ಗೆಲುವಿನ ದಾಖಲೆ ಮುರಿದ ನೊವಾಕ್‌ ಟೆನಿಸ್ ಲೋಕದಲ್ಲಿ ಹೆಚ್ಚು ಗ್ರ್ಯಾನ್ ಸ್ಲಾಮ್ ಗೆದ್ದ ಮಾರ್ಗರೆಟ್ ಕೋರ್ಟ್ (24) ದಾಖಲೆ ಸರಿಗಟ್ಟಿದರು.

2021 ರ ಯುಎಸ್ ಓಪನ್‌ನಲ್ಲಿ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ ಮೆಡ್ವೆಡೆವ್ ಚೊಚ್ಚಲ ಬಾರಿಗೆ ಪ್ರಶಸ್ತಿಯನ್ನು ಗೆದ್ದಿದ್ದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon