ಯುದ್ಧ ಕೊನೆಗೊಳಿಸಲು ಬದ್ಧ; ವಿಜಯೋತ್ಸದಲ್ಲಿ ಟ್ರಂಪ್‌ ಘೋಷಣೆ

WhatsApp
Telegram
Facebook
Twitter
LinkedIn

ನ್ಯೂಯಾರ್ಕ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಡೊನಾಲ್ಡ್‌ ಟ್ರಂಪ್‌, ಯುದ್ಧದ ನಿಲ್ಲಿಸುವ ಪ್ರಸ್ತಾವವನ್ನು ಮಾಡಿದ್ದಾರೆ.

“ನಾನು ಯುದ್ಧ ಆರಂಭ ಮಾಡಲು ಹೋಗಲಾರೆ, ಯುದ್ಧವನ್ನು ಕೊನೆಗೊಳಿಸಲು ಮುಂದಾಗುತ್ತೇನೆ’ ಎಂದು ಘೋಷಣೆ ಮಾಡಿದ್ದಾರೆ.

ಜತೆಗೆ ಜು.13ರಂದು ಪ್ರಚಾರದ ವೇಳೆ ತಮ್ಮ ಮೇಲೆ ನಡೆದಿದ್ದ ದಾಳಿ ಸ್ಮರಿಸಿದ ಅವರು “ಮಹತ್ವವಾಗಿರುವ ಯಾವುದೋ ಉದ್ದೇಶಕ್ಕೆ ದೇವರು ನನ್ನನ್ನು ಬದುಕಿಸಿದ್ದಾನೆ’ ಎಂದರು.

ಫ್ಲೋರಿಡಾದಲ್ಲಿ ವಿಜಯೋತ್ಸವ ಭಾಷಣ ಮಾಡಿದ ಟ್ರಂಪ್‌, ರಷ್ಯಾ- ಉಕ್ರೇನ್‌ ಹಾಗೂ ಇಸ್ರೇಲ್‌-ಹಮಾಸ್‌-ಲೆಬೆನಾನ್‌ ನಡುವಿನ ಯುದ್ಧದ ಬಗ್ಗೆ ಪರೋಕ್ಷವಾಗಿ ಪ್ರಸ್ತಾವಿಸಿ,”ನಾನು ಯುದ್ಧವನ್ನು ಆರಂಭಿಸುವುದಿಲ್ಲ, ನಿಲ್ಲಿಸುತ್ತೇನೆ” ಎಂದಿದ್ದಾರೆ. ಇನ್ನು ಅಮೆರಿಕದ ಗಡಿ ಭಾಗವನ್ನು ಕೂಡಲೇ ಬಂದ್‌ ಮಾಡಲಾಗುವುದು. ಯಾವುದೇ ಕಾರಣಕ್ಕೂ ಅಕ್ರಮ ವಲಸಿಗರು ಪ್ರವೇಶಿಸದಂತೆ ನೋಡಿಕೊಳ್ಳಲಾಗುವುದು. ತೆರಿಗೆಗಳ ಹೊರೆ ಇಳಿಸುತ್ತೇನೆ’ ಎಂದು ಘೋಷಿಸಿದರು.

ಉಸಿರಿರುವರೆಗೂ ಹೋರಾಟ: ಕಳೆದ 4 ವರ್ಷ ದಲ್ಲಾಗಿರುವ ವಿಭಜನೆಯನ್ನು ಸರಿಪಡಿಸುವ ಕಾಲ ಇದಾಗಿದ್ದು, ಒಂದಾಗುವ ಸಮಯ ಬಂದಿದೆ. ಕೆಲವು ಸಮಯದವರೆಗೆ ನಾವು ದೇಶವನ್ನು ಒಟ್ಟಾಗಿ ಮುನ್ನಡೆಸಬೇಕಿದೆ. ನಾವಿಂದು ಇತಿಹಾಸ ವನ್ನು ರಚಿಸಿದ್ದೇವೆ. ಸುರಕ್ಷಿತ-ಸಮೃದ್ಧ ಅಮೆರಿಕವನ್ನಾಗಿ ರೂಪಿಸುವವರೆಗೆ ನಾನು ವಿಶ್ರಮಿಸಲಾರೆ. ನನ್ನ ದೇಹದಲ್ಲಿ ಉಸಿರಿರುವವರೆಗೂ ನಿಮಗಾಗಿ ಹೋರಾಡುತ್ತೇನೆ ಎಂದರು.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon