ಯುದ್ಧ ಪೀಡಿತ ಇಸ್ರೇಲ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ನಟಿ ನುಶ್ರತ್

ಬೆಂಗಳೂರು : ಪ್ರಸ್ತುತ ಇಸ್ರೇಲ್​ ಮತ್ತು ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರ ಗುಂಪಿನ ನಡುವೆ ಉಂಟಾಗಿರುವ ಸಂಘರ್ಷದ ನಡುವೆ ಯುದ್ಧ ಪೀಡಿತ ಪ್ರದೇಶದಲ್ಲೇ ಸಿಲುಕಿದ್ದ ಬಾಲಿವುಡ್​ ನಟಿ ನುಶ್ರತ್ ಭರುಚ್ಚ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ

ಹೈಫಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮ್ಮ ನಟನೆಯ ಅಕೆಲ್ಲಿಯ ಪ್ರದರ್ಶನಕ್ಕಾಗಿ ನುಶ್ರತ್ ಭರುಚ್ಚ ಇಸ್ರೇಲ್​ಗೆ ತೆರಳಿದ್ದರು. ಮಧ್ಯಾಹ್ನ ೨ ಘಂಟೆ ಸುಮಾರಿಗೆ ಅವರು ಮುಂಬೈನಲ್ಲಿರುವ ಛತ್ರಪತಿ ವಿಮಾಣ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಯುದ್ಧ ಪೀಡಿತ ಇಸ್ರೇಲ್​ನಲ್ಲೇ ನಟಿ ನುಶ್ರತ್​ ಅವರು ಸಿಲುಕಿಕೊಂಡಿದ್ದು, ಅವರ ಕುಟುಂಬವನ್ನು ಆತಂಕಕ್ಕೆ ದೂಡಿತ್ತು. ಆದರೆ, ಇದೀಗ ಅವರು ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿದ್ದಾರೆ.

Advertisement

ಇದಕ್ಕೂ ಮುನ್ನ ಮಾತನಾಡಿದ್ದ ನುಶ್ರತ್​ ತಂಡದ ಸದಸ್ಯರೊಬ್ಬರು ದುರಾದೃಷ್ಟವಶಾತ್​ ಸಂಘರ್ಷ ಪೀಡಿತ ಇಸ್ರೇಲ್​ನಲ್ಲಿ ನುಶ್ರತ್​ ಸಿಲುಕಿದ್ದಾರೆ. ಹೈಫಾ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಸ್ರೇಲ್​ಗೆ ಹೊಗಿದ್ದರು. ಶನಿವಾರ ಮಧ್ಯಾಹ್ನ ಕೊನೆಯ ಬಾರಿಗೆ ಆಕೆಯೊಂದಿಗೆ ಸಂಪರ್ಕ ಸಾಧಿಸಿದ್ದೆ. ಬೇಸ್​ಮೆಂಟ್​ ಒಂದರಲ್ಲಿ ಸುರಕ್ಷಿತವಾಗಿ ಇರುವುದಾಗಿ ತಿಳಿಸಿದರು ಎಂದು ಮಾಹಿತಿ ನೀಡಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement