ಅಹಮದಾಬಾದ್: ಗುಜರಾತಿನ ಗರ್ಬಾಗೆ ಯುನೆಸ್ಕೋ ಅಂತರರಾಷ್ಟ್ರೀಯ ಮನ್ನಣೆ ನೀಡಿದ್ದು, ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ಘೋಷಿಸಿದೆ. ಗುಜರಾತ್‌ನಲ್ಲಿ ನವರಾತ್ರಿಯ ಸಂದರ್ಭದಲ್ಲಿ ಪ್ರತಿ ವರ್ಷ ಒಂಬತ್ತು ದಿನಗಳ ಗರ್ಬಾವನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಸಹಸ್ರಾರು ಜನ ಸೇರಿ ತಾಯಿ ಅಂಬೆಯ ಆರಾಧನೆಯ ಹಬ್ಬವನ್ನು ಆಚರಿಸುತ್ತಾರೆ. ಗುಜರಾತಿನ ಸಂಸ್ಕೃತಿಗೆ ಸಂಬಂಧಿಸಿದ ಗರ್ಬಾ ನೃತ್ಯ ಮತ್ತು ತಾಯಿ ಅಂಬೆಯ ಆರಾಧನೆಯು ರಾಜ್ಯದ ಸಂಸ್ಕೃತಿಯನ್ನು ವ್ಯಕ್ತಪಡಿಸುತ್ತದೆ. ಈ ವಿಚಾರವನ್ನು ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ಹಂಚಿಕೊಂಡಿರುವ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು, ‘ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ (ಐಸಿಎಚ್) ಪಟ್ಟಿಯಲ್ಲಿ ‘ಗುಜರಾತಿನ ಗರ್ಬಾ’ ಅನ್ನು ಸೇರಿಸಲಾಗಿದೆ’ ಎಂದು ಬರೆದಿದ್ದಾರೆ.