ಲಕ್ನೋ: ಕಾಡಿನಿಂದ ಬಂದ ತೋಳಗಳು 7 ಮಕ್ಕಳನ್ನು ಬಲಿ ಪಡೆದುಕೊಂಡಿದ್ದು, ಮಹಿಳೆಯೊಬ್ಬಳನ್ನು ಗಾಯಗೊಳಿಸಿದ್ದ ಘಟನೆ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಮಕ್ಕಳನ್ನು ಕೊಂದ ತೋಳಗಳಿಗೆ ಆಪರೇಷನ್ ಭೇಡಿಯಾ ನಡೆಸಿ ಸೆರೆ ಹಿಡಿಯಲಾಗಿದೆ.
ಕಳೆದ ಎರಡು ತಿಂಗಳಲ್ಲಿ ಬಹ್ರೈಚ್ ಜಿಲ್ಲೆಯ 7 ಮಕ್ಕಳನ್ನು ಕೊಂದಿದೆ. ಮಹಿಳೆಯೊಬ್ಬರನ್ನು ತೋಳಗಳು ಗಾಯಗೊಳಿಸಿದ್ದವು. ಮಂಗಳವಾರ ರಾತ್ರಿ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಪಟಾಕಿ ಸಿಡಿಸುವ ಮೂಲಕ ತೋಳಗಳನ್ನು ಸೆರೆಹಿಡಿಯಲಾಗಿದೆ. ಸೆರೆ ಹಿಡಿದ ತೋಳವನ್ನು ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.
ತೋಳಗಳನ್ನು ಹಿಡಿಯಲು ಸುಮಾರು 16 ತಂಡಗಳನ್ನು ರಚಿಸಲಾಗಿತ್ತು. ಆಪರೇಷನ್‌ಲ್ಲಿ ಡ್ರೋನ್ ಕ್ಯಾಮೆರಾ ಮತ್ತು ನಕ್ಷೆಗಳ ಉಪಯೋಗ ಮಾಡಿಕೊಳ್ಳಲಾಗಿತ್ತು. ಅರಣ್ಯ ಇಲಾಖೆಯ ಡಂಗ್ ಮತ್ತು ಉರಿನೆ ಹೆಸರಿನ ಆನೆಗಳನ್ನು ಬಳಸಿಕೊಂಡು ಅಧಿಕಾರಿಗಳು ತೋಳಗಳನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.