ಯುವಕರಿಗೆ ಒಳ್ಳೆಯ ಮಾರ್ಗದರ್ಶನ ಸಿಕ್ಕರೆ ಸಾಮಾಜಿಕ ಆಸ್ತಿ: ತರಳಬಾಳು ಶ್ರೀ

 

ಸಿರಿಗೆರೆ: ಸಿರಿಗೆರೆಯ ಶ್ರೀಗುರುಶಾಂತೇಶ್ವರ ಭವನದ ಮುಂಭಾಗದಲ್ಲಿಯ ಬೃಹತ್ ವೇದಿಕೆಯಲ್ಲಿ ಫೆ 22 ರಿಂದ 24 ವರೆಗೆ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಗುರುವಾರ ಸಂಜೆ ವಿದ್ಯುಕ್ತವಾಗಿ ಡಾ||ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು, ಶ್ರೀ ಗುರುಶಾಂತದೇಶೀಕೇಂದ್ರ ಸ್ವಾಮೀಜಿ ಹಾಗೂ ವಿಶ್ವಬಂಧು ಮರುಳಸಿದ್ದರ ಭಾವಚಿತ್ರಗಳಿಗೆ ಪುಷ್ಪ ಅರ್ಪಿಸಿ ಚಾಲನೆ ನೀಡಿದರು.

ಡಾ||ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಮಾತನಾಡಿ ತಮ್ಮ ಜೀವನದ ಹಾಸ್ಯ ಪ್ರಸಂಗಗಳನ್ನು ಹಂಚಿಕೊAಡರು. ಯುವ ಶಕ್ತಿ ತುಂಬಿದ ಜಲಾಶಯವಿದ್ದ ಹಾಗೆ, ಅವರಿಗೆ ಒಳ್ಳೆಯ ಮಾರ್ಗದರ್ಶನ ಸಿಕ್ಕರೆ ಸಾಮಾಜಿಕ ಆಸ್ತಿಯಾಗಿ ನಿರ್ಮಾಣವಾಗುತ್ತಾರೆ. ಇಂದು ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಆದ್ದರಿಂದ ಶ್ರೀಮಠದಿಂದ ಗ್ರಾಮೀಣ ಭಾಗದ ಯುವಕರಿಗೆ ಕ್ರೀಡೆಯನ್ನು ಏರ್ಪಡಿಸಿ ಅವರಲ್ಲಿ ಕ್ರೀಡಾಸಕ್ತಿ, ಚೈತನ್ಯ, ಸಂಘಟನೆ, ಜೀವನೋತ್ಸಾಹ ತುಂಬುವುದಕ್ಕೆ ಸ್ಪೂರ್ತಿಯಾಗುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಶ್ರೀಮಠದಿಂದ ಆಯೋಜಿಸಲಾಗುತ್ತದೆ ಎಂದರು.

Advertisement

ಬರಗಾಲದಲ್ಲೂ ಸಹ ನಮ್ಮ ಮಠದ ಭಕ್ತಾದಿಗಳು, ರೈತರು ತರಳಬಾಳು ಹುಣ್ಣಿಮೆ ಮಹೋತ್ಸವ ಸಮಾರಂಭಕ್ಕೆ ನಿಗದಿಯಾದ ಮೊತ್ತಕ್ಕಿಂತಲೂ ಅಧಿಕ ಮೊತ್ತದ ದೇಣಿಗೆಯನ್ನು ಸಮರ್ಪಿಸಿದ್ದಾರೆ. ಅವರಿಗೆ ನಮ್ಮ ಅಭಿನಂದನೆಗಳು ಎಂದು ಎಲ್ಲ ರೈತರನ್ನು ಸ್ಮರಿಸಿದರು.

ವಿಜಯಪುರ ಜ್ಞಾನಾಯೋಗಾಶ್ರಮ ಪರಮಪೂಜ್ಯ ಶ್ರೀ ಬಸವಲಿಂಗ ಸ್ವಾಮೀಜಿ, ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಡಿ.ವಿ.ಪರಮಶಿವಮೂರ್ತಿ ಮಾತನಾಡಿದರು.

ಜವಚನ ವರ್ಷಿಣಿ ಕಲಾತಂಡ ಅರಸೀಕೆರೆ, ತರಳಬಾಳು ಕಲಾಸಂಘ ವಿದ್ಯಾರ್ಥಿಗಳಿಂದ ಭರತನಾಟ್ಯ, ದಾವಣಗೆರೆ ಅನುಭವಮಂಟಪ ವಿದ್ಯಾರ್ಥಿಗಳಿಂದ ವಚನನೃತ್ಯ ಹಾಗೂ ನೃತ್ಯರೂಪಕ, ಬೆನಕನಹಳ್ಳಿ ವಿನಾಯಕ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜೊತೆಗೆ ವಿಶ್ವಬಂಧು ಮರುಳಸಿದ್ಧಕಾವ್ಯ, ಮರುಳಸಿದ್ಧಾಂಕ ವಿಮರ್ಶೆ, ಶರಣರ ನುಡಿಮುತ್ತುಗಳು, ವಿಶ್ವಬಂಧು ಮರುಳಸಿದ್ಧ ದರ್ಪಣ ಪುಸ್ತಕಗಳ ಲೋಕಾರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಅನುಷ ಕೆ. ಹಿರೆಮಠ್ ಕನ್ನಡ ವiತ್ತು ಸಂಸ್ಕೃತಿ ಪರಂಪರೆ ಬಗ್ಗೆ ಮಾತನಾಡಿದರು. ವಿಜಯಪುರ ಜಿಲ್ಲೆ ತ್ರಿಕೋಟ ಮಲ್ಲಿಕಾರ್ಜುನ ಸ್ವಾಮೀಜಿಯವರು, ಗಂಗಾವತಿ ಪ್ರಾಣೇಶ್, ಯುಎಸ್‌ಎ ಶಿಕಾಗೊ ಡಾ.ಅಣ್ಣಾಪುರ ಶಿವಕುಮಾರ್, ರಾಜ್ಯ ರೈತ ಸಂಘ ಹಾಗೂ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಬೆಂಗಳೂರು ಆಹಾರ, ನಾಗರಿಕ ಸರಬರಾಜು ಇಲಾಖೆ ಆರ್.ಜಿ.ಮುಕುಂದಸ್ವಾಮಿ ಹಾಗೂ ಸ್ಥಳೀಯ ಶಾಲಾ-ಕಾಲೇಜುಗಳ ಪ್ರಾಚಾರ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಸಿರಿಗೆರೆ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಇದ್ದರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement