ಬೆಂಗಳೂರು: ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ‘ಯುವನಿಧಿ’ಯಡಿ ನಿರುದ್ಯೋಗ ಭತ್ಯೆ ನೀಡುವ ಯೋಜನೆಗೆ ಡಿ. 26ರಿಂದ ನೋಂದಣಿ ಪ್ರಾರಂಭವಾಗಲಿದೆ.
2023ರಲ್ಲಿ ತೇರ್ಗಡೆಯಾದ 180 ದಿನ ಬಳಿಕ ಉದ್ಯೋಗ ಸಿಗದ ಪದವೀಧರರಿಗೆ ₹3,000 & ಡಿಪ್ಲೋಮಾದವರಿಗೆ ₹1,500 ನೀಡಲಾಗುತ್ತದೆ.
ಈ ಸೌಲಭ್ಯ 2 ವರ್ಷಗಳವರೆಗೆ ಮಾತ್ರ ಅನ್ವಯ, ಅಷ್ಟರೊಳಗೆ ಉದ್ಯೋಗ ದೊರಕಿದ್ದಲ್ಲಿ ಭತ್ಯೆ ಸ್ಥಗಿತವಾಗಲಿದೆ. ಸುಳ್ಳು ಹೇಳಿ ನೋಂದಣಿ ಮಾಡಿಸಿದವರಿಗೆ ದಂಡ ವಿಧಿಸಲಾಗುತ್ತದೆ. ವ್ಯಾಸಂಗ ಮುಂದುವರಿಸುವವರಿಗೆ ಈ ಭತ್ಯೆಗೆ ಸಿಗಲ್ಲ.