ನವದೆಹಲಿ: IAS, IPS, IFS ಅಧಿಕಾರಿಗಳಾಗಬೇಕು ಎಂದು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸಾವಿರಾರು ಆಕಾಂಕ್ಷಿಗಳಿಗೆ, ಈಗಾಗಲೇ ಪರೀಕ್ಷೆಯಲ್ಲಿ ಯಶಸ್ವಿಯಾದವರ ಜೀವನ-ಸಲಹೆಗಳು ಸ್ಫೂರ್ತಿದಾಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ಇಂದು ಯುವ ಐಎಎಸ್ ಅಧಿಕಾರಿಯ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ.
ಇವರು ಕಾನಿಷ್ಕಾ ಸಿಂಗ್ ಸಾಗರ್, ದೆಹಲಿಯ ನಿವಾಸಿ. ಯುಪಿಎಸ್‌ಸಿ ಪರೀಕ್ಷೆಯ ಎರಡನೇ ಪ್ರಯತ್ನದಲ್ಲಿ ಇವರು ಯಶಸ್ವಿಯಾದರು. ಅವರು ಮನಃಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಮೊದಲ ಯತ್ನದಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿತು, ಎರಡನೆಯದರಲ್ಲಿ ಅದನ್ನು ಸರಿಪಡಿಸಲು ತಮ್ಮ ಕೈಲಾದ ಪ್ರಯತ್ನ ಮಾಡಿದರು. ಇದಕ್ಕಾಗಿ, ಕನಿಷ್ಕಾ ಸಿಂಗ್ 60 ಅಣಕು ಪರೀಕ್ಷೆಗಳನ್ನು ತೆಗೆದುಕೊಂಡಿದ್ದರಂತೆ. IFS ಕನಿಷ್ಕಾ ಸಿಂಗ್ ಅವರ ಯಶಸ್ಸಿನ ಕಥೆ ಇಲ್ಲಿದೆ.
IFS ಕನಿಷ್ಕಾ ಸಿಂಗ್ 12 ನೇ ತರಗತಿ ನಂತರ, ದೆಹಲಿ ವಿಶ್ವವಿದ್ಯಾನಿಲಯದ ಲೇಡಿ ಶ್ರೀ ರಾಮ್ ಕಾಲೇಜ್ ನಿಂದ ಮನೋವಿಜ್ಞಾನದಲ್ಲಿ ಪದವಿ ಪಡೆದರು.ಕನಿಷ್ಕಾ ಸಿಂಗ್ ಕಾಲೇಜಿನಲ್ಲಿ ಓದುವ ಸಮಯದಲ್ಲೇ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡು ಸರ್ಕಾರಿ ಉದ್ಯೋಗ ಮಾಡಲು ನಿರ್ಧರಿಸಿದ್ದರು.
ಕನಿಷ್ಕಾ ಸಿಂಗ್ 2017 ರಲ್ಲಿ UPSC ಪರೀಕ್ಷೆಯ ಮೊದಲ ಪ್ರಯತ್ನವನ್ನು ನೀಡಿದರು. ಈ ಪ್ರಯತ್ನದಲ್ಲಿ ಆಕೆ ಯುಪಿಎಸ್ ಸಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲರಾದರು. ಇದರ ನಂತರ, ತನ್ನ ತಪ್ಪುಗಳಿಂದ ಪಾಠವನ್ನು ಕಲಿತ, ಅವರು 2018 ರಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಎರಡನೇ ಪ್ರಯತ್ನವನ್ನು ಮಾಡಿದರು. ಎರಡನೇ ಪ್ರಯತ್ನ ಯಶಸ್ಸಿಯಾಗಿ 416ನೇ ರ್ಯಾಂಕ್ ಪಡೆಯುವ ಮೂಲಕ ಐಎಫ್ ಎಸ್ ಅಧಿಕಾರಿಯಾದರು.
ಕನಿಷ್ಕಾ ಮನೋವಿಜ್ಞಾನವನ್ನು ಐಚ್ಛಿಕ ವಿಷಯವಾಗಿ ಆರಿಸಿಕೊಂಡಿದ್ದರು. IFS ಕನಿಷ್ಕಾ ಸಿಂಗ್ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ತರಬೇತಿಯೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಕನಿಷ್ಕಾ ಸಿಂಗ್ ಅವರು ಐಎಎಸ್ ಅಧಿಕಾರಿ ಅನ್ಮೋಲ್ ಸಾಗರ್ ಅವರನ್ನು ವಿವಾಹವಾಗಿದ್ದಾರೆ. ಅನ್ಮೋಲ್ ಪ್ರಸ್ತುತ ಮಹಾರಾಷ್ಟ್ರದ ಗೊಂಡಿಯಾದಲ್ಲಿ ನೇಮಕಗೊಂಡಿದ್ದಾರೆ. ಅದೇ ಸಮಯದಲ್ಲಿ, ಕನಿಷ್ಕಾ ಸಿಂಗ್ ಅವರನ್ನು ತುರ್ಕಮೆನಿಸ್ತಾನದ ರಾಜಧಾನಿ ಅಶ್ಗಾಬಾತ್ ನ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾಯಿತು. ಅಲ್ಲಿ ಎರಡನೇ ಕಾರ್ಯದರ್ಶಿ ಮತ್ತು ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.