ಇಸ್ರೋ ಯೂಟ್ಯೂಬ್ ಚಾನೆಲ್‌ನಲ್ಲಿ ಚಂದ್ರಯಾನ 3 ಮಿಷನ್ ಸಾಫ್ಟ್ ಲ್ಯಾಂಡಿಂಗ್ ನೇರ ಪ್ರಸಾರವನ್ನು 80 ಲಕ್ಷಕ್ಕೂ ಅಧಿಕ ಮಂದಿ ಏಕಕಾಲದಲ್ಲಿ ವೀಕ್ಷಿಸಿದ್ದಾರೆ. ಈ ಮೂಲಕ ಇದು ಜಾಗತಿಕವಾಗಿ ಹೆಚ್ಚು ವೀಕ್ಷಿಸಿದ ಲೈವ್ ಸ್ಟ್ರೀಮ್ ಆಗಿದೆ ಎಂದು ಸ್ಯಾಕ್ನಿಲ್ಕ್ ತಿಳಿಸಿದೆ.
ಭಾರತದ ಮೂರನೇ ಚಂದ್ರಯಾನ ಮಿಷನ್ ಲೈವ್ ಟೆಲಿಕಾಸ್ಟ್ ಅನ್ನು ನಿರೀಕ್ಷೆಗೂ ಮೀರಿ ಜನ ವೀಕ್ಷಿಸಿದ್ದಾರೆ.ಚಂದ್ರಯಾನ -3 ರ ಯಶಸ್ವಿ ಸಾಧನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರಿಗೆ ಅಭಿನಂದನಾ ಸಂದೇಶವನ್ನು ವಿಡಿಯೋ ಮೂಲಕ ಕಳುಹಿಸಿದ್ದಾರೆ. ಅದಕ್ಕೂ ಮೊದಲು ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು.
ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿರುವ ಪ್ರಧಾನಿ ಮೋದಿ ಅವರು ಸೋಮನಾಥ್ ಅವರಿಗೆ ವೈಯಕ್ತಿಕವಾಗಿ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು
ಈ ವೇಳೆ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿರುವ ಇಸ್ರೋ ಪ್ರಧಾನ ಕಚೇರಿಗೆ ಆಗಸ್ಟ್ 26ರ ಶನಿವಾರ ಭೇಟಿ ನೀಡಿ ಇಡೀ ತಂಡವನ್ನು ವೈಯಕ್ತಿಕವಾಗಿ ಅಭಿನಂದಿಸುವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.