ಆಧುನಿಕ ಕೃಷಿಯಲ್ಲಿ ರೈತರು ಮೂಲ ಕೃಷಿಗೆ ಅಧಿಕ ಯೂರಿಯ ಬಳಸುತ್ತಾರೆ. ಇದರ ಬಳಕೆಯಿಂದ ಸಸಿಗಳು ಗಟ್ಟಿಯಾಗಿ ನಿಲ್ಲುವ ಸಾಮರ್ಥ್ಯ ಕಳೆದುಕೊಂಡು ನೆಲಕ್ಕೆ ಬಾಗಿ ಕಾಳು ಕಟ್ಟುವ ಪ್ರಕ್ರಿಯೆಯಲ್ಲಿ ಅಡಚಣೆ
ಉಂಟಾಗಿ ಇಳುವರಿ ಕಡಿಮೆಯಾಗುತ್ತದೆ. ಅಧಿಕ ಪ್ರಮಾಣದಲ್ಲಿ ಯೂರಿಯ ಬಳಕೆಯಿಂದ ಮಣ್ಣು ಹುಳಿಯಾಗಿ ಪರಿವರ್ತನೆಯಾಗುತ್ತದೆ.
ಅಧಿಕ ಪ್ರಮಾಣದ ಯೂರಿಯ ಬಳಕೆಯಿಂದ ಯೂರಿಯವು ಅಮೋನಿಯವಾಗಿ ನಂತರ ನೈಟ್ರೇಟ್ ಆಗಿ ಪರಿವರ್ತನೆಗೊಂಡು ಅಂತರ್ಜಲ ಸೇರಿ ಕುಡಿಯುವ ನೀರು ಸಹ ಕಲುಷಿತವಾಗುತ್ತದೆ