ಉತ್ತರ ಪ್ರದೇಶ : ಅಯೋಧ್ಯೆಯ ಹನುಮಾನ್ಗರ್ಹಿ ದೇವಾಲಯದ ಅರ್ಚಕನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇನ್ನು 44 ವರ್ಷದ ಅರ್ಚಕ ರಾಮ್ ಸಹ್ರೆಯ್ ದಾಸ್ ಅವರ ಕೊಲೆ ಪ್ರಕರಣ ಉತ್ತರ ಪ್ರದೇಶವೇ ಬಿಚ್ಚಿ ಬೀಳುವಂತೆ ಮಾಡಿದೆ. ಇಂದು ಬೆಳಗ್ಗೆ ರಾಮಜನ್ಮಭೂಮಿ ಸಂಕೀರ್ಣದ ಕೊಠಡಿಯಲ್ಲಿ ಅರ್ಚಕರ ಶವ ಪತ್ತೆಯಾಗಿದೆ. ಕೊಲೆಯಲ್ಲಿ ಇಬ್ಬರು ಆರೋಪಿಗಳ ಕೈವಾಡವಿದೆ ಎಂದು ಪೊಲೀಸರು ಶಂಕಿಸಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬನಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಕೊಲೆಯಾದ ವ್ಯಕ್ತಿ ಇಬ್ಬರು ಶಿಷ್ಯರೊಂದಿಗೆ ಹನುಮಾನ್ ದೇವಸ್ಥಾನದ ಪಕ್ಕದ ಕೋಣೆಯಲ್ಲಿ ತಂಗಿದ್ದರು.