ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ಯಾವುದೇ ರಕ್ತಪಾತವಿಲ್ಲದೇ ರಾಮಮಂದಿರ ನಿರ್ಮಾಣವಾಗಲು ಮೋದಿಯಿಂದ ಮಾತ್ರ ಸಾಧ್ಯ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಮ ಮಂದಿರಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದೇವೆ. 2019ರಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾದ ಬಳಿಕ ರಕ್ತಪಾತವಿಲ್ಲದೆ ಭೂಮಿಪೂಜೆ ನೆರವೇರಿಸಲಾಯಿತು’ ಎಂದಿದ್ದಾರೆ.
ಮೋದಿ ಪ್ರಯತ್ನದಿಂದ 2014ರ ನಂತರ ಭಾರತ ಕ್ರೀಡೆಯಲ್ಲಿ ಮಿಂಚುತ್ತಿದೆ, ಖೇಲೋ ಇಂಡಿಯಾ ಗೇಮ್ ಚೇಂಜರ್ ಆಗಿ ಮಾರ್ಪಟ್ಟಿದೆ ಎಂದು ಹರಿಯಾಣ ಭೇಟಿ ವೇಳೆ ಹೇಳಿದ್ದಾರೆ.