ಬೆಂಗಳೂರು; ನಿನ್ನೆ ನಿಧನರಾದ ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಡಲಾಗಿದೆ.
ಬೆಳಗ್ಗೆ 8ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಂತರ ರಾಜಾಜಿನಗರದಿಂದ ರಸ್ತೆ ಮಾರ್ಗವಾಗಿ ಅಂತಿಮ ಯಾತ್ರೆ ಸಾಗಲಿದೆ. ದೊಡ್ಡಬಸತಿಯಲ್ಲಿರುವ ಛಲವಾದಿ ಮಹಾಸಭಾ ಆವರಣದಲ್ಲಿ ಅಂತಿಮ ಸಂಸ್ಕಾರಕ್ಕೆ ಸರ್ಕಾರದ ಬಳಿ ಕುಟುಂಬಸ್ಥರು ಅನುಮತಿ ಕೋರಿದ್ದಾರೆ.