ಮಾಸ್ಕೋ: ಮಾಸ್ಕೋದ ಬಹುದೊಡ್ಡ ಒಳಾಂಣ ಸಭಾಂಗಣ ಕ್ರೋಕಸ್ ಸಿಟಿ ಹಾಲ್‌ನಲ್ಲಿ ನಡೆದ ಸಂಗೀತ ಕಛೇರಿ ಕಾರ್ಯಕ್ರಮದಲ್ಲಿ ಐವರು ಬಂದೂಕುಧಾರಿಗಳು ಗುಂಡು ಹಾರಿಸಿದ ಪರಿಣಾಮ ಕನಿಷ್ಠ 60ಜನರು ಸಾವನ್ನಪ್ಪಿದ್ದು, 150 ಮಂದಿ ಗಾಯಗೊಂಡಿರುವುದಾಗಿ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್‌ನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಕ್ರಾಕಸ್ ಸಿಟಿಯಲ್ಲಿ ಶುಕ್ರವಾರ ರಾತ್ರಿ ಸಂಗೀತ ಕಚೇರಿ ನಡೆಯುತ್ತಿತ್ತು. ಸಾವಿರಕ್ಕೂ ಹೆಚ್ಚು ಜನ ಅಲ್ಲಿ ನೆರೆದಿದ್ದರು. ಈ ವೇಳೆ ಹಾಲ್ ಗೆ ನುಗ್ಗಿದ ಶಸ್ತ್ರಸಜ್ಜಿತ ಉಗ್ರರು ಮನಸೋ ಇಚ್ಚೆ ದಾಳಿ ನಡೆಸಿದ್ದಾರೆ.
ಜನರು ಭಯಗೊಂಡು ದಿಕ್ಕಾಪಾಲಾದ ಪರಿಣಾಮ ಕಾಲ್ತುಳಿತ ಉಂಟಾಗಿದ್ದು ಸಾವು-ನೋವಿನ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಲಿದೆ. ಉಗ್ರರು ಸಭಾಂಗಣಕ್ಕೆ ಬೆಂಕಿಯನ್ನು ಹಚ್ಚಿದ್ದಾರೆ ಎಂದು ವರದಿಯಾಗಿದೆ. ಈ ಹತ್ಯೆ ಹೊಣೆಯನ್ನು ಐಸಿಎಸ್ ಉಗ್ರ ಸಂಘಟನೆ ಹೊತ್ತುಕೊಂಡಿರುವುದಾಗಿ ವರದಿಯಾಗಿದೆ.