ನವದೆಹಲಿ:ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಲೇಖನ ತೀವ್ರ ರಾಜಕೀಯ ಕೋಲಾಹಲವನ್ನು ಸೃಷ್ಟಿಸಿದೆ. ಹಲವು ಬಿಜೆಪಿ ನಾಯಕರು, ಯದುವೀರ ಒಡೆಯರ್ ಕೂಡ ಟೀಕಿಸಿದ್ಧಾರೆ.
ರಾಹುಲ್ ಲೇಖನದ ಈಸ್ಟ್ ಇಂಡಿಯಾ ಕಂಪನಿಯು ಭಾರತದ ರಾಜಮನೆತನವನ್ನು ಬೆದರಿಸಿ ಲಂಚ ನೀಡಿ ಭಾರತವನ್ನು ಆಳಿತು ಎನ್ನುವ ಸಾಲು ತೀವ್ರ ಕೋಲಾಹಲ ಸೃಷ್ಟಿಸಿದೆ. ಈ ಕಾರಣದಿಂದ ರಾಹುಲ್ ಗಾಂಧಿಯವರ ಈ ಲೇಖನವನ್ನು ರಾಜಮನೆತನಕ್ಕೆ ಸೇರಿದ ಹಲವು ಬಿಜೆಪಿ ನಾಯಕರು ಖಂಡಿಸಿದ್ದಾರೆ.
ರಾಜಮನೆತನದ ಮರ್ಯಾದಿ ತೆಗೆದಿದ್ದಾರೆ ಎಂದು ದಿಯಾ ಕುಮಾರಿ ದೂರಿದ್ದಾರೆ. ಈ ಲೇಖನವು ರಾಹುಲ್ ಅವರ ಅಜ್ಞಾನವನ್ನು ತೋರಿಸುತ್ತದೆ ಎಂಬುವುದಾಗಿ ಬಿಜೆಪಿ ನಾಯಕಿ ಸಿಂಧಿಯಾ ದೂಷಿಸಿದ್ದಾರೆ. ನಮ್ಮ ರಾಜ ಮಹಾರಾಜರು ತಮ್ಮ ಸ್ವಾಭಿಮಾನ ಮತ್ತು ದೇಶದ ಅಸ್ಮಿತೆಯೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದು ಯದುವೀರ ಒಡೆಯರ್ ಹೇಳಿದ್ದಾರೆ. ಹಲವು ವಿಷಯಗಳ ಬಗ್ಗೆ ರಾಹುಲ್ ಈ ಲೇಖನದಲ್ಲಿ ಮಾತನಾಡಿದ್ದಾರೆ. ರಾಹುಲ್ ಗಾಂಧಿಯವರ ಈ ಲೇಖನವನ್ನು ರಾಜಮನೆತನಕ್ಕೆ ಸೇರಿದ ಹಲವು ಬಿಜೆಪಿ ನಾಯಕರು ಖಂಡಿಸಿದ್ದಾರೆ.