ಜೈಪುರ : ರಾಜಸ್ಥಾನದ ವಿಧಾನಸಭೆಗೆ ನವೆಂಬರ್ ೨೩ ರಂದು ಚುನಾವಣೆ ನಡೆಯಲಿದ್ದು, ಫಲಿತಾಂಶ ಡಿಸೆಂಬರ್‌ನಲ್ಲಿ ಹೊರ ಬೀಳಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಧಿಕಾರಿ ಹಿಡಿಯುವ ಪಕ್ಷ ಯಾವುದು ಎಂದು ಎಬಿಪಿ ಸಿವೋಟರ್ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟು 200 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷವು 59 ರಿಂದ 69.ಸದ್ಯ ವಿಪಕ್ಷದಲ್ಲಿರುವ ಬಿಜೆಪಿ 127 ರಿಂದ 137 ಹಾಗೂ ಉತ್ತರ ಪ್ರದೇಶದ ಪ್ರಾದೇಶಿಕ ಪಕ್ಷ ಬಿಎಸ್‌ಪಿ -2 ಸ್ಥಾನಗಳಲ್ಲಿ ಗೆಲವು ಸಾಧಿಸಲಿವೆ. ಕೇಸರಿ ಪಕ್ಷವು ಸುಮಾರು 46 ಶೇಕಡಾ ಮತಗಳನ್ನು ಪಡೆಯುವ ಸಾಧ್ಯತೆಯಿದೆ, ಇದು 2018 ರ ಚುನಾವಣೆಯಲ್ಲಿ ಪಡೆದ ಶೇಕಡಾ 38 ಕ್ಕಿಂತ ಹೆಚ್ಚಾಗಿದೆ. ಮತ್ತೊಂದೆಡೆ, ಕಾಂಗ್ರೆಸ್ 59 ರಿಂದ 69 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದ್ದು, ಶೇಕಡಾ 42 ರಷ್ಟು ಮತಗಳನ್ನು ಪಡೆಯುತ್ತದೆ ಎಂದು ಸಮೀಕ್ಷೆ ವಿವರಗಳನ್ನು ಬಹಿರಂಗ ಮಾಡಿದೆ.