ರಾಜಸ್ಥಾನ, ಪಂಜಾಬ್ ನ 14 ಸ್ಥಳಗಳಲ್ಲಿ ಎನ್ಐಎ ದಾಳಿ : 6 ಮಂದಿ ವಶಕ್ಕೆ

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ ಖಲಿಸ್ತಾನ್ ಮತ್ತು ಸಂಘಟಿತ ಅಪರಾಧಿಗಳ ಜೊತೆ ನಂಟು ಹೊಂದಿರುವ ಆರೋಪದ ಮೇರೆಗೆ ಪಂಜಾಬ್ ಮತ್ತು ರಾಜಸ್ಥಾನದ 16 ಸ್ಥಳಗಳಿಗೆ ಮಂಗಳವಾರ ದಾಳಿ ನಡೆಸಿದೆ.

ವರದಿಯ ಪ್ರಕಾರ, ಪಂಜಾಬ್ ನ 14 ಮತ್ತು ರಾಜಸ್ಥಾನ 2 ಸ್ಥಳಗಳಿಗೆ ದಾಳಿ ನಡೆಸಿ, ದಾಳಿಯ ವೇಳೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಅರೋಪದ ಮೇಲೆ ವಿಚಾರಣೆಗಾಗಿ ಎನ್ಐಎ 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

ಇನ್ನು ಈ ದಾಳಿಯು ಭಯೋತ್ಪಾದಕರು, ದರೋಡೆಕೋರರು ಮತ್ತು ಮಾದಕವಸ್ತು ಕಳ್ಳಸಾಗಣೆದಾರ ಸಹಯೋಗದಿಂದ ಆಯೋಜಿಸಲಾದ ಉದ್ದೇಶಿತ ಹತ್ಯೆ, ಸುಲಿಗೆ ಹಾಗೂ ಇನ್ನಿತರೆ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದೆ ಎಂದು ವರದಿಯಾಗಿದೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement