ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ ಸೋಂಕಿನಿಂದ ಇತ್ತೀಚಿನ ದಿನಗಳಲ್ಲಿ ಒಟ್ಟು ಏಳು ಮಂದಿ ಮೃತಪಟ್ಟಿದ್ದು, ಅವರಲ್ಲಿ ನಾಲ್ಕು ಜನರು ಕೋವಿಡ್ ಲಸಿಕೆಯನ್ನೇ ಪಡೆದಿರಲಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು , ‘ಮೃತಪಟ್ಟ ಮೂವರಲ್ಲಿ ಜೆಎನ್.1 ತಳಿಯ ಕೋವಿಡ್ ವೈರಾಣುವಿನ ಸೋಂಕು ಇರುವುದು ದೃಢಪಟ್ಟಿದೆ’ ಎಂದರು. ಹೊಸ ಉಪ ತಳಿಯ ಕೋವಿಡ್ ವೈರಾಣುವಿನ ಹರಡುವಿಕೆ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಸಚೆ ನಡೆಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿನ ಬೆಳವಣಿಗೆಗಳ ಬಗ್ಗೆಯೂ ಮಾಹಿತಿ ಪಡೆದು, ಚರ್ಚೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮತ್ತಷ್ಟು ಮಾಹಿತಿ ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ವ್ಯಾಕ್ಸಿನ್ ನೀಡಲು ಕೇಂದ್ರಕ್ಕೆ ಮನವಿ
ಕೋವಿಡ್ ಸ್ಯಾಂಪಲ್ಸ್ ಮಾಡಲು ಪ್ರೋಟೋಕಾಲ್ ಇದೆ. ಅಂಥಹ ಸ್ಯಾಂಪಲ್ಸ್ ಕಳುಹಿಸಲಾಗುತ್ತೆ. ವ್ಯಾಕ್ಸಿನ್ ನೀಡವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ತದ್ದೇವೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಫ್ಲೂ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಅಗತ್ಯ ಇರುವವರಿಗೆ ಕೋವಿಡ್ ಮುನ್ನೆಚ್ಚರಿಕೆ ಡೋಸ್ ಕೂಡ ನೀಡಲಾಗುವುದು. ಇದಕ್ಕಾಗಿ 30,000 ಡೋಸ್ ಕೋವಿಡ್ ಲಸಿಕೆ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದರು.ನಾಲ್ಕು ಆಮ್ಲಜನಕ ಸಂಚಾರಿ ಘಟಕಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲಿ ಸನ್ನದ್ಧತೆ ಪರೀಕ್ಷಿಸಲಾಗುವುದು. ಕೋವಿಡ್ ವೈರಾಣುವಿನ ವಂಶವಾಹಿ ಸಂರಚನೆ ಪರೀಕ್ಷೆ ಹೆಚ್ಚಳಕ್ಕೂ ತೀರ್ಮಾನಿಸಲಾಗಿದೆ ಎಂದರು. ಕಾರ್ಯಕ್ರಮ, ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುವ ಪ್ರಸ್ತಾವ ಇಲ್ಲ ಎಂದು ತಿಳಿಸಿದರು.
ಸರ್ಕಾರ ಜಾರಿಗೆ ತಂದ ಕೋವಿಡ್ ಕಂಟ್ರೋಲ್‌ಗೆ ಮಾರ್ಗಸೂಚಿ :
* ಎಲ್ಲರೂ ಮಾಸ್ಕ್ ಹಾಕಿಕೊಳ್ಳಿ
* ಬೇರೆ ಬೇರೆ ಖಾಯಿಲೆ ಇರುವವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ
* ಶಾಲಾ ಮಕ್ಕಳಿಗೆ ಸಿಂಪ್ಟಮ್ಸ್ ಇದ್ದರೆ ಶಾಲೆಗೆ ಕಳುಹಿಸಬೇಡಿ
* ಹೊಸ ವರ್ಷಕ್ಕೆ ನಿರ್ಬಂಧನೆ ಇಲ್ಲ
* ಹೆಚ್ಚು ಜನರ ಇರುವ ಪ್ರದೇಶದಲ್ಲಿ ಹೋಗಬೇಡಿ
* ಸೋಶಿಯಲ್ ಡಿಸ್ಟೆನ್ಸ್ ಇರಬೇಕು
* ಕೋವಿಡ್ ರೋಗಿಗಳು 7 ದಿನಗಳ ಕಾಲ ಕಡ್ಡಾಯ ಹೋಂ ಐಸೋಲೇಷನ್
* ಸೋಂಕಿತರಿಗೆ ಆಫೀಸ್‌ಗಳಲ್ಲಿ ರಜೆ ನೀಡಬೇಕು
- ಟೆಸ್ಟಿಂಗ್ ದರದ ಬಗ‌್ಗೆ ಕಮಿಟಿ
* 2 ದಿನದಲ್ಲಿ ದರವನ್ನು ನಿಗದಿ
* ಸಿಟಿ ಸ್ಕ್ಯಾನ್ ಮಾಡಬಾರದು
* ಪಾಸಿಟಿವ್ ಬಂದ ಮೇಲೆ ಮಾಡಬೇಕು
* ಕೋವಿಡ್ ಪಾಸಿಟಿವ್ ಬಂದವರು 7 ದಿನ ಕಡ್ಡಾಯವಾಗಿ ಹೋಮ್ ಐಸೋಲೆಷನ್
* ಐಸೋಲೇಶನ್ ನಲ್ಲಿ ಇರುವವರಿಗೆ 7 ದಿನ ರಜೆ ಅವಕಾಶ ಕಲ್ಪಿಸುವ ಸಾಧ್ಯತೆ
* ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೂ ಅನ್ವಯ - ಕೊವಿಡ್ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಲ್ಲಿ ಸಿಮ್ಟಮ್ಸ್ ಕಂಡಬಂದರೆ ಕಡ್ಡಾಯ ಟೆಸ್ಟಿಂಗ್..