ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯನ್ ಮಾದರಿಗಳಲ್ಲಿ ಆರೋಗ್ಯಕ್ಕೆ ಮಾರಕವಾದ ಅಂಶ & ಕೃತಕ ಬಣ್ಣ ಸೇರಿ ವ್ಯಸನಕಾರಿ ರಾಸಾಯನಿಕ ಪತ್ತೆಯಾಗಿದ್ದು, ಈ ಅಸುರಕ್ಷಿತ ವಸ್ತು ಬಳಕೆ ಮಾಡದಂತೆ ಆರೋಗ್ಯ ಇಲಾಖೆ ನಿರ್ಬಂಧ ಹೇರಲು ಮುಂದಾಗಿದೆ.
ಗೋಬಿ ಮಂಚೂರಿ ಹಾನಿಕಾರಿ ಬಗ್ಗೆ ತನಿಖೆ- ಪರೀಕ್ಷೆಗೆ ಸೂಚಿಸಲಾಗಿದ್ದು, ಆ ಕುರಿತ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗದ ವರದಿ ಈಗ ಬಂದಿದೆ.
ಈ ಬಗ್ಗೆ ಪರಿಶೀಲಿಸಿ ಇಂದು ಸೂಕ್ತ ಕ್ರಮ ಪ್ರಕಟಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುಳ್ಯದಲ್ಲಿ ಹೇಳಿದ್ದಾರೆ.